ಪಶ್ಚಿಮ ಬಂಗಾಳದ ದುರ್ಗಾಪೂಜಾ ಸಂಪ್ರದಾಯದ ವಿರುದ್ಧ ಮಾಡಿದ “ಅತ್ಯಂತ ವಿವಾದಾತ್ಮಕ ಅವಹೇಳನಕಾರಿ” ಹೇಳಿಕೆ ನೀಡಿದ್ದಕ್ಕಾಗಿ ವಿಶ್ವ ಭಾರತಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರನ್ನು ಪ್ರಧಾನ ಮಂತ್ರಿ ಕಚೇರಿ(PMO) ಕರೆಸಿದೆ.
19 ನೇ ಶತಮಾನದಲ್ಲಿ ಭಾರತೀಯ ರಾಜರು ಬ್ರಿಟಿಷರ ಒಲವು ಗಳಿಸಲು ಪರಸ್ಪರ ಪೈಪೋಟಿ ನಡೆಸಿದ್ದರಿಂದ ಬ್ರಿಟಿಷರನ್ನು ಸಮಾಧಾನಪಡಿಸಲು ದುರ್ಗಾ ಪೂಜೆಯನ್ನು ಪ್ರಾರಂಭಿಸಲಾಯಿತು ಎಂದು ಉಪಕುಲಪತಿ ಹೇಳಿದ್ದರು.
ಬ್ರಿಟಿಷರನ್ನು ಸಮಾಧಾನಪಡಿಸಲು ದುರ್ಗಾಪೂಜೆ ಪ್ರಾರಂಭಿಸಲಾಯಿತು. 19 ನೇ ಶತಮಾನದಲ್ಲಿ, ಬ್ರಿಟಿಷರಿಂದ ಹೆಚ್ಚು ಕೃಪೆ ಗಳಿಸುವ ರಾಜರು ತಮ್ಮತಮ್ಮಲ್ಲೇ ಸ್ಪರ್ಧಿಸುತ್ತಿದ್ದರು. ದುರ್ಗಾ ಪೂಜೆಯ ಸಮಯದಲ್ಲಿ ಮದ್ಯಪಾನ ಮಾಡುವ ಸಂಪ್ರದಾಯವೂ ಇತ್ತು ಎಂದು ಫೆಬ್ರವರಿ 22 ರಂದು ವಿಶ್ವವಿದ್ಯಾನಿಲಯದ ಉಪಾಸನಾ ಗೃಹದಲ್ಲಿ ನಿಯಮಿತ ಪೂಜಾ ವಿಧಿವಿಧಾನದ ಸಂದರ್ಭದಲ್ಲಿ ಬಿದ್ಯುತ್ ಚಕ್ರವರ್ತಿ ಹೇಳಿದರು.
ಶಾಂತಿನಿಕೇತನ ಟ್ರಸ್ಟ್ ಸಲ್ಲಿಸಿದ್ದ ದೂರಿನ ಅನ್ವಯ ಸಮನ್ಸ್ ಜಾರಿ ಮಾಡಲಾಗಿದೆ. ಮಾರ್ಚ್ 10 ರಂದು ಟ್ರಸ್ಟ್ ಕಾರ್ಯದರ್ಶಿ ಅನಿಲ್ ಕೋನಾರ್ ಅವರು ವಿಶ್ವ ಭಾರತಿ ಆಚಾರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪರಿಹಾರ ಕೋರಿ ದೂರು ದಾಖಲಿಸಿದ್ದಾರೆ.