ಅದಾಗ ತಾನೇ ಹುಟ್ಟಿದ ಕೂಸನ್ನು ಮಡಿಲಲ್ಲಿ ಹಿಡಿದುಕೊಳ್ಳುವುದೇ ಒಂದು ಸುಂದರ ಅನುಭವ. ಈ ಮಹಿಳೆಗೆ ತನ್ನ ಮೊಮ್ಮಗನನ್ನು ಮೊದಲ ಬಾರಿಗೆ ಹೀಗೆ ಹಿಡಿದುಕೊಳ್ಳುವುದು ಒಂಥರಾ ಸ್ಪೆಷಲ್ ಎನಿಸಿದೆ. ಇದರಲ್ಲಿ ಏನಪ್ಪಾ ವಿಶೇಷ ಅಂದ್ರಾ..?
ಇನ್‌ಸ್ಟಾಗ್ರಾಂ ನ ಗುಡ್ ನ್ಯೂಸ್ ಮೂವ್ಮೆಂಟ್ ಎಂಬ ಪೇಜ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಪುಟ್ಟ ಮಗುವನ್ನು ಹಿಡಿದಿದ್ದು, ಮಹಿಳೆಯೊಬ್ಬರು ಗೇಟ್ ಬಳಿ ನಿಲ್ಲುತ್ತಾರೆ. ಆ ಮಹಿಳೆಗೆ ದೃಷ್ಟಿ ಸಮಸ್ಯೆ ಇದ್ದು, ಆ ಪುಟಾಣಿ ತನ್ನದೇ ಮೊಮ್ಮಗ ಎಂದು ತಿಳಿದಿರುವುದಿಲ್ಲ. ಪಕ್ಕದಲ್ಲಿರುವ ವ್ಯಕ್ತಿ ಆ ಮಹಿಳೆ ಮಗುವನ್ನು ಹಿಡಿದುಕೊಳ್ಳುವಂತೆ ಮಾಡಿದಾಗ ಆಕೆಯ ಸಂತಸಕ್ಕೆ ಪಾರವೇ ಇಲ್ಲದಂತಾಗಿ ಆಕೆ ಆನಂದ ಭಾಷ್ಪ ಹರಿಸುತ್ತಾರೆ.
ಗರ್ಭಿಣಿಯರು ಎಳನೀರು ಸೇವಿಸಿದರೆ ಏನಾಗುತ್ತೆ ಗೊತ್ತಾ…?
“ಈ ಅಜ್ಜಿ ತಮ್ಮ ಮೊಮ್ಮಗನನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು ! ನನ್ನ ತಾಯಿ ಅಂಧೆಯಾಗಿದ್ದು, ಆಕೆಯ ಹುಟ್ಟುಹಬ್ಬಕ್ಕೆ ಒಂದಷ್ಟು ಹೂವುಗಳನ್ನು ತರುತ್ತಿರುವುದಾಗಿ ನನ್ನ ಸಹೋದರ ತಿಳಿಸಿದ್ದಾನೆ. ಆಕೆ ಮಗುವನ್ನು ಹಿಡಿದುಕೊಂಡು, ಏನಿದು ಎಂದು ಕೇಳುತ್ತಾರೆ. ಮೈ ಲವ್ !” ಎಂದು ಕ್ಯಾಪ್ಷನ್ ತಿಳಿಸುತ್ತದೆ. ವಿಡಿಯೋಗೆ 60 ಸಾವಿರ ಲೈಕ್‌ಗಳು ಸಿಕ್ಕಿದ್ದು, ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳು ಸಹ ಸಂದಾಯವಾಗಿವೆ.