ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಪುಷ್ ಬ್ಯಾಕ್ ನಲ್ಲಿ ಟೋ ಟ್ರಕ್ ಗೆ ಡಿಕ್ಕಿ ಹೊಡೆದು ವಿಸ್ತಾರಾ ವಿಮಾನದ ಎಂಜಿನ್ ಗೆ ಹಾನಿಯಾಗಿದೆ.
ಘಟನೆ ನಡೆದಾಗ ವಿಸ್ತಾರಾ ಏರ್ ಬಸ್ A320 ಮುಂಬೈನಿಂದ ಕೋಲ್ಕತ್ತಾಗೆ ಟೇಕ್-ಆಫ್ ಆಗಲು ಸಿದ್ಧವಾಗಿತ್ತು. ವಿಮಾನದಲ್ಲಿ 140 ಪ್ರಯಾಣಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಟೋ ಟ್ರಕ್ ಗಳ ಸಹಾಯದಿಂದ ಲಗೇಜ್ ಗಳನ್ನು ವಿಮಾನಕ್ಕೆ ತುಂಬಿಸಲಾಗುತ್ತದೆ. ಅದೇ ಟೋ ಟ್ರಕ್ ನಿಂದ ಲಗೇಜ್ ತಳ್ಳುವ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಟ್ರಕ್ ನ ಹಿಂಭಾಗ ವಿಮಾನದ ಎಂಜಿನ್ ಗೆ ಡಿಕ್ಕಿ ಹೊಡೆದಿದೆ. ಎಲ್ಲಾ ಪ್ರಯಾಣಿಕರು ವಿಮಾನವನ್ನು ಹತ್ತಿದ್ದು, ವಿಮಾನ ಟೇಕ್ ಆಫ್ ಮಾಡಲು ಸಿದ್ಧವಾಗಿತ್ತು.
ಆದರೆ, ಈ ಡಿಕ್ಕಿಯಿಂದ ಯಾವುದೇ ಮಹತ್ವದ ಹಾನಿ ಆಗಿಲ್ಲ.. ಈ ಅಪಘಾತ ಸಂಭವಿಸಿದಾಗ ವಿಮಾನದಲ್ಲಿದ್ದ ಎಲ್ಲಾ 140 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.