ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಫಲ ನೀಡಿಲ್ಲ. ಕಾರ್ಖಾನೆಗೆ ಶಾಶ್ವತ ಬೀಗ ಬೀಳುವ ಕಾಲ ಸನ್ನಿಹಿತವಾಗಿದೆ.
ವಿಎಎಸ್ಎಲ್ ಮುಚ್ಚುವ ಪ್ರಸ್ತಾವನೆಯನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಂಗೀಕರಿಸಿದೆ. ಈ ಮೂಲಕ 100 ವರ್ಷಗಳ ಇತಿಹಾಸ ಹೊಂದಿದ ಪ್ರತಿಷ್ಠಿತ ವಿಐಎಸ್ಎಲ್ ಕಾರ್ಖಾನೆ ಸಂಪೂರ್ಣ ಮುಚ್ಚುವ ಪ್ರಕ್ರಿಯೆ ಆರಂಭವಾಗಿದೆ.
ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆಸಿದ ಹೋರಾಟ ಫಲ ನೀಡಿಲ್ಲ. ಜನವರಿ 16ರಂದು ನಡೆದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಬೋರ್ಡ್ ಮೀಟಿಂಗ್ ನಲ್ಲಿ ವಿಐಎಸ್ಎಲ್ ಮುಚ್ಚುವ ಪ್ರಸ್ತಾವನೆ ಅಂಗೀಕರಿಸಲಾಗಿದೆ.
ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು, ವಿಐಎಸ್ಎಲ್ ಕ್ಲೋಸರ್ ಪ್ರಸ್ತಾವನೆ ಅಂಗೀಕಾರವಾದ ಬಗ್ಗೆ ಕಾರ್ಮಿಕ ಸಂಘಕ್ಕೆ ಮಾಹಿತಿ ನೀಡಿದ್ದಾರೆ. ಕಾರ್ಮಿಕರ ಸಂಘದ ಪದಾಧಿಕಾರಿಗಳ ನಿಯೋಗ ಈ ಕುರಿತಾಗಿ ಸೈಲ್ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದು, ಉದ್ಯೋಗ ಭದ್ರತೆ ಕಾರ್ಮಿಕರ ಬೇಡಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.