ನವದೆಹಲಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸ್ಟೀಲ್ ಪ್ಲಾಂಟ್ ಪುನಶ್ಚೇತನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನಮ್ಮ ನಿರ್ಧಾರಕ್ಕೆ ರಾಜ್ಯದವರೇ ಆಡೆ ತಡೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾವತಿ ಸ್ಟೀಲ್ ಪ್ಲಾಂಟ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಭೆಯನ್ನು ಕರೆಯುತ್ತಿಲ್ಲ. ಸೌಜನ್ಯಕಾದರೂ ಒಂದು ಪತ್ರವನ್ನು ಕೂಡ ಬರೆದಿಲ್ಲ. ನಾವು ಕೆಲಸ ಮಾಡುತ್ತೇವೆ ಎಂದರೆ ಅದಕ್ಕೂ ಅಸೂಯೆ ಪಡುತ್ತಾರೆ. ದೀಪಾವಳಿ ಹಬ್ಬದ ದಿನ ಕೆಲಸಗಾರರನ್ನು ಮನೆಗೆ ಕಳುಹಿಸಿದ್ದೀರಿ, ನೀವು ಮನೆ ಬೆಳಗುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಹೆಚ್ಎಂಟಿ ವಿಚಾರವೂ ಅದೇ ಆಗಿದೆ. ಮಹಾರಾಜರು ಕೊಟ್ಟಿರುವ ಭೂಮಿ ಅದು. ಇವರು ಬಂದಿರುವುದು ಲೂಟಿ ಹೊಡೆಯೋಕೆ ಬಂದಿದ್ದಾರೆ. ದಾಖಲೆಗಳನ್ನು ತೆಗೆದು ನೋಡಿದ್ದೀರಾ? ಅರಣ್ಯ ಪ್ರದೇಶವಾಗಿದ್ದರೆ ಯಾಕೆ ಕಟ್ಟಡ ನಿರ್ಮಿಸಿದ್ದೀರಿ. ಹೆಚ್ಎಂಟಿ ಪುನಶ್ಚೇತನ ಮಾಡಬೇಕು ಎಂದರೆ ಹೊಸ ಕತೆ ಶುರು ಮಾಡಿದ್ದೀರಿ. ನೀವು ಕರ್ನಾಟಕವನ್ನು ಉದ್ದಾರ ಮಾಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.