2024 ರ ಹೊಸ ನಿಯಮದಂತೆ ಇನ್ಮುಂದೆ ದುಬೈಗೆ ಪ್ರಯಾಣಿಸುವವರು ವಿಮಾನದಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ವಿಮಾನದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣವು ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ಸಾಮಾನ್ಯವಾಗಿ ಜನ ಕ್ಯಾಬಿನ್ ಬ್ಯಾಗ್‌ನಲ್ಲಿ ಔಷಧಿಗಳಂತಹ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬಹುದು. ಆದಾಗ್ಯೂ ದುಬೈಗೆ ಹೋಗುವ ವಿಮಾನದಲ್ಲಿ ಇದು ಸಾಧ್ಯವಾಗುವುದಿಲ್ಲ ಏಕೆಂದರೆ ಹೊಸ ನಿಯಮಗಳ ಪ್ರಕಾರ ಆಯ್ದ ಕೆಲವು ವಸ್ತುಗಳನ್ನು ಮಾತ್ರ ಕೊಂಡೊಯ್ಯಲು ಅನುಮತಿಸಲಾಗಿದೆ. ದುಬೈ ವಿಮಾನ ಬ್ಯಾಗೇಜ್ ನಿಯಮಗಳಲ್ಲಿ ಬದಲಾವಣೆಯಾಗಿದ್ದು ಕೆಲವು ವಸ್ತುಗಳನ್ನು ವಿಮಾನದಲ್ಲಿ ಸಾಗಿಸಲು ಕಾನೂನು ಅಪರಾಧವೆಂದು ಪರಿಗಣಿಸಲಾಗಿದೆ.
ಈ ಉತ್ಪನ್ನಗಳ ಸಾಗಾಟ ನಿಷಿದ್ಧ:
* ಕೊಕೇನ್, ಹೆರಾಯಿನ್, ಗಸಗಸೆ ಮತ್ತು ತಲೆತಿರುಗುವಿಕೆಗೆ ಕಾರಣವಾಗುವ ಔಷಧಗಳು.
* ವೀಳ್ಯದೆಲೆ ಮತ್ತು ಕೆಲವು ಗಿಡಮೂಲಿಕೆಗಳು
* ಆನೆ ದಂತ ಮತ್ತು ಘೇಂಡಾಮೃಗಗಳ ಕೊಂಬು, ಜೂಜಾಟದ ಉಪಕರಣಗಳು, ಮೂರು ಪದರಗಳ ಮೀನುಗಾರಿಕೆ ಬಲೆಗಳು ಮತ್ತು ಬಹಿಷ್ಕರಿಸಿದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಸಾಗಣೆಯೂ ಸಹ ಅಪರಾಧವೆಂದು ಪರಿಗಣನೆ.
* ಮುದ್ರಿತ ವಸ್ತುಗಳು, ತೈಲ ವರ್ಣಚಿತ್ರಗಳು, ಛಾಯಾಚಿತ್ರಗಳು, ಪುಸ್ತಕಗಳು ಮತ್ತು ಕಲ್ಲಿನ ಶಿಲ್ಪಗಳು
* ನಕಲಿ ನೋಟು, ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ಮಾಂಸಾಹಾರ
ಯಾವುದೇ ಪ್ರಯಾಣಿಕರು ಈ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದಲ್ಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.
ಈ ವಸ್ತುಗಳನ್ನು ಸಾಗಿಸಲು ಹಣ ಪಾವತಿಸಬೇಕು:
• ಗಿಡಗಳು
* ರಸಗೊಬ್ಬರ
• ಔಷಧಿಗಳು
• ವೈದ್ಯಕೀಯ ಉಪಕರಣಗಳು
* ಪುಸ್ತಕಗಳು
* ಸೌಂದರ್ಯವರ್ಧಕಗಳು
* ಟ್ರಾನ್ಸ್ ಮಿಷನ್ ಮತ್ತು ವೈರ್ ಲೆಸ್ ಸಾಧನಗಳು
* ಆಲ್ಕೊಹಾಲ್ ಯುಕ್ತ ಪಾನೀಯಗಳು
* ವೈಯಕ್ತಿಕ ಆರೈಕೆ ಉತ್ಪನ್ನಗಳು
* ಇ-ಸಿಗರೇಟ್‌ಗಳು
* ಎಲೆಕ್ಟ್ರಾನಿಕ್ ಹುಕ್ಕಾಗಳು.
ಸಾಗಿಸಲು ಅವಕಾಶವಿಲ್ಲದ ನಿರ್ಬಂಧಿತ ಔಷಧಿಗಳು:
* ಬೆಟಾಮೆಥೋಡಾಲ್
* ಆಲ್ಫಾ-ಮೀಥೈಲ್ ಫಿನಾನಿಲ್
* ಗಾಂಜಾ
* ಕೋಡಾಕ್ಸಿಮ್
* ಫೆಂಟನಿಲ್
* ಮೆಥಡೋನ್
* ಅಫೀಮು
* ಆಕ್ಸಿಕೊಡೋನ್
* ಟ್ರಿಮೆಪೆರಿಡಿನ್
* ಫೆನೋಪೆರಿಡಿನ್
* ಕ್ಯಾಥಿನೋನ್
* ಕೊಡೈನ್
* ಆಂಫೆಟಮೈನ್