ಮಳೆಗಾಲ ಪ್ರಾರಂಭವಾಗುತ್ತಿದೆ. ಹಾಗಾಗಿ ಕೆಲವರು ಮಳೆಗಾಲದಲ್ಲಿ ಹೊರಗಡೆ ಸುತ್ತಾಡಲು ಬಯಸುತ್ತಾರೆ. ಮಳೆಗಾಲದಲ್ಲಿ ಕೂಡ ನೀವು ನೋಡಬಹುದಾದಂತಹ ಅದ್ಭುತವಾದ ಸ್ಥಳಗಳಿವೆ. ಈ ಸ್ಥಳಗಳನ್ನು ನೋಡಿ ನೀವು ಕೂಡ ಸಂತೋಷಪಡುತ್ತೀರಿ. ಹಾಗಾಗಿ ಅಂತಹ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ.
ಡಾರ್ಜಿಲಿಂಗ್ : ಮಳೆಗಾಲದಲ್ಲಿ ಡಾರ್ಜಿಲಿಂಗ್ ಗೆ ಪ್ರಯಾಣ ಮಾಡಬಹುದು. ಮಳೆಗಾಲದಲ್ಲಿ ಇಲ್ಲಿನ ಪರ್ವತಗಳು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಮತ್ತು ಆಕರ್ಷಕವಾಗಿ ಕಾಣುತ್ತದೆ. ಇಲ್ಲಿ ಮಳೆಗಾಲದಲ್ಲಿ ಕಾಫಿ ತೋಟಗಳಿಗೆ ಭೇಟಿ ನೀಡಬಹುದು. ಇಲ್ಲಿ ನೀವು ಹೋಟೆಲ್ ಕೂಡ ಬುಕ್ ಮಾಡಬಹುದು.
ಶಿಲ್ಲಾಂಗ್ : ಮೇಘಾಲಯದ ಶಿಲ್ಲಾಂಗ್ ಮಳೆಗಾದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಮೋಡಗಳ ನಡುವಿನ ಹಚ್ಚ ಹಸಿರಾದ ಪರ್ವತಗಳು ಮತ್ತು ಜಲಪಾತಗಳ ಸೌಂದರ್ಯ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿ ಎಲಿಫೆಂಟ್ ಫಾಲ್ಸ್ ಗೆ ಭೇಟಿ ನೀಡಬಹುದು.
ಕರ್ನಾಟಕದ ಕೂರ್ಗ್ : ಇದು ದಂಪತಿಗಳಿಗೆ ನೆಚ್ಚಿನ ಹನಿಮೂನ್ ತಾಣವಾಗಿದೆ. ಮಳೆಗಾಲದಲ್ಲಿ ಮದುವೆಯಾದ ದಂಪತಿಗಳು ಇಲ್ಲಿಗೆ ಬರಬಹುದು. ಇಲ್ಲಿನ ಜಲಪಾತಗಳು, ಕಾಫಿ ತೋಟಗಳು ಮತ್ತು ಸರೋವರಗಳು ನಿಮಗೆ ಉಲ್ಲಾಸವನ್ನು ನೀಡುತ್ತದೆ. ಮಳೆಗಾಲದಲ್ಲಿ ಇಲ್ಲಿ ಟ್ರೆಕ್ಕಿಂಗ್, ಕುದುರೆ ಸವಾರಿ ಮಾಡಬಹುದು.
ಮುನ್ನಾರ್ : ಕೇರಳದ ಮುನ್ನಾರ್ ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಇದು ಒಂದು ಭವ್ಯವಾದ ಗಿರಿಧಾಮವಾಗಿದೆ. ಮಳೆಗಾಲದಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಲ್ಲಿ ಟ್ರೆಕ್ಕಿಂಗ್ ಮಾಡಬಹುದು ಮತ್ತು ಕಾಫಿ ತೋಟಗಳ ಸೌಂದರ್ಯವನ್ನು ನೋಡಬಹುದು.
ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋಗಲು ಸಾಧ್ಯವಾಗದವರು ಮಳೆಗಾಲದಲ್ಲಿ ನಿಮ್ಮ ಕುಟುಂಬದ ಜೊತೆ ಈ ಸ್ಥಳಗಳಿಗೆ ಭೇಟಿ ನೀಡಿ ಆನಂದಿಸಿ