![](https://kannadadunia.com/wp-content/uploads/2024/01/01fd0a30-e53e-4aba-abfb-13e0b4d1b11f.jpg)
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯಿಸಿರುವ ವಿಷ್ಣುಪ್ರಿಯ ಸಿನಿಮಾದ ‘ಚಿಗುರು ಚಿಗುರು’ ಎಂಬ ರೋಮ್ಯಾಂಟಿಕ್ ಹಾಡು ಇದೇ ಜನವರಿ 27ರಂದು youtube ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ವಿಕೆ ಪ್ರಕಾಶ್ ನಿರ್ದೇಶಕರು. ಈ ಚಿತ್ರವನ್ನು ನಿರ್ಮಾಪಕ ಕೆ ಮಂಜು ತಮ್ಮ ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರಿಯಾ ವಾರಿಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ನಿಹಾಲ್ ರಾಜು ಸೇರಿದಂತೆ ಮೊದಲಾದ ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಸುರೇಶ್ ಸಂಕಲನವಿದ್ದು, ವಿನೋದ್ ಭಾರತಿ ಛಾಯಾಗ್ರಹಣವಿದೆ. ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ.
![](https://kannadadunia.com/wp-content/uploads/2024/01/e5567a95-935a-4b4d-8b3e-93b0aff01882-705x1024.jpg)