
ಲಾಕ್ಡೌನ್ ಸಮಯದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಬೀದಿ ನಾಯಿಗಳಿಗೆ ಆಹಾರ ನೀಡುವುದು ಹಾಗೂ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂಥ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಅವರಲ್ಲಿ ಕಾಲಿವುಡ್ ನಟ ವಿಶಾಲ್ ಕೂಡ ಒಬ್ಬರು.
ಇತ್ತೀಚೆಗೆ ಚೆನ್ನೈನ ಬೀದಿಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ನಟ ವಿಶಾಲ್ ಹಂಚಿಕೊಂಡಿದ್ದು, ಪ್ರಾಣಿಗಳಿಗೆ ದಯೆ ತೋರಿಸಿ ಎಂದು ಹೇಳಿದ್ದಾರೆ. ಸದ್ಯ, ಈ ವಿಡಿಯೋ ಈಗ ವೈರಲ್ ಆಗಿದೆ.
ಇನ್ ಸ್ಟಾಗ್ರಾಂ ನಲ್ಲಿ ಸಕ್ರಿಯಳಾಗಿದ್ದ ಯುವತಿ ನಿಗೂಢವಾಗಿ ನಾಪತ್ತೆ
ಲಾಕ್ಡೌನ್ ಸಮಯದಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡಿ ಎಂದು ಹಲವಾರು ಖ್ಯಾತನಾಮರು ಧ್ವನಿ ಎತ್ತಿದ್ದರು. ಕೆಲವರು ಪ್ರಾಣಿಗಳಿಗೆ ಆಹಾರ ನೀಡಲು ಮುಂದಾದರೆ, ಇನ್ನೂ ಕೆಲವರು ಹಣಕಾಸಿನ ಸಹಾಯದ ಮೂಲಕ ಬೆಂಬಲ ಕೊಟ್ಟಿದ್ದರು. ಜನರಲ್ಲಿ ಬೀದಿ ಪ್ರಾಣಿಗಳಿಗೆ ಆಹಾರ ನೀಡುವಂತೆ ಪ್ರೋತ್ಸಾಹಿಸಿದ್ದಾರೆ. ಅವರಲ್ಲಿ ನಟ ಆರವ್, ಐಶ್ವರ್ಯ ಮೆನನ್ ಮತ್ತು ವರಲಕ್ಷ್ಮಿ ಶರತುಕುಮಾರ್ ಸೇರಿದಂತೆ ಹಲವಾರು ಮಂದಿ ಉತ್ತಮ ಕಾರ್ಯ ಮಾಡಿದ್ದಾರೆ.