ಆಂಧ್ರಪ್ರದೇಶದ ಕೆಲವೊಂದು ಮನೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಈ ಸಂಪ್ರದಾಯವನ್ನು ಈಗಲೂ ಪಾಲಿಸಿಕೊಂಡು ಬಂದಿದ್ದು, ಇದೀಗ ಕುಟುಂಬವೊಂದು ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದ ಮಗಳು – ಅಳಿಯನಿಗೆ ಬರೋಬ್ಬರಿ 379 ಬಗೆಯ ವಿವಿಧ ಖಾದ್ಯಗಳನ್ನು ಬಡಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಆಂಧ್ರ ಪ್ರದೇಶದ ಏಲೂರು ನಗರದ ಕುಟುಂಬ ತಮ್ಮ ಅಳಿಯ ವಿಶಾಖಪಟ್ಟಣದ ಆನಕಾಪಲ್ಲಿ ಮೂಲದ ಬುದ್ಧ ಮುರಳೀಧರ್ ಅವರಿಗೆ ಈ ಭಕ್ಷ ಭೋಜನ ಬಡಿಸಿದ್ದು, ಇವರು ಕುಸುಮಾ ಅವರೊಂದಿಗೆ ಕಳೆದ ವರ್ಷದ ಏಪ್ರಿಲ್ 16 ರಂದು ವಿವಾಹವಾಗಿದ್ದರು.