ಪ್ರತಿಯೊಂದು ದೇಶದ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಆಫ್ರಿಕನ್ ದೇಶಗಳ ಪದ್ಧತಿಗಳು ಜನರ ಗಮನ ಸೆಳೆಯುತ್ತವೆ. ದಕ್ಷಿಣ ಆಫ್ರಿಕಾದ ಜುಲು ಬುಡಕಟ್ಟು ಜನಾಂಗದಲ್ಲಿ ವಿಚಿತ್ರ ಪದ್ಧತಿಯೊಂದಿದೆ.
ಇಲ್ಲಿನ ಬುಡಕಟ್ಟು ಜನಾಂಗದಲ್ಲಿ ಉಮೆಮುಲೋ ಹೆಸರಿನ ವಿಶಿಷ್ಟ ಸಂಪ್ರದಾಯವನ್ನು ಆಚರಿಲಾಗುತ್ತದೆ. ಹುಡುಗಿ ತನ್ನ ಕನ್ಯತ್ವವನ್ನು ಸಾಬೀತುಪಡಿಸಬೇಕು. ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ದಕ್ಷಿಣ ಆಫ್ರಿಕಾದ ಜುಲು ಬುಡಕಟ್ಟು ಜನಾಂಗದಲ್ಲಿ, ಹುಡುಗಿ 21 ವರ್ಷ ವಯಸ್ಸಿನವರೆಗೂ ಕನ್ಯೆಯಾಗಿಯೇ ಉಳಿಯುವುದು ಕಡ್ಡಾಯವಾಗಿದೆ. ಹುಡುಗಿಗೆ 21 ವರ್ಷ ತುಂಬಿದಾಗ, ಕುಟುಂಬವು ಪಾರ್ಟಿಯನ್ನು ಆಯೋಜಿಸುತ್ತದೆ. ಇದರಲ್ಲಿ, ಹುಡುಗಿಯ ಕನ್ಯತ್ವವನ್ನು ಒಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಹುಡುಗಿ ಇನ್ನೂ ಕನ್ಯೆ ಎಂದು ಇಡೀ ಕುಟುಂಬ ಸಂಭ್ರಮಿಸುತ್ತದೆ.
ಹುಡುಗಿಯ ಕುಟುಂಬದ ಸದಸ್ಯರು, ಸಂಬಂಧಿಕರು ಇದ್ರಲ್ಲಿ ಪಾಲ್ಗೊಳ್ಳುತ್ತಾರೆ. ಹುಡುಗಿಯ ಗೌರವಾರ್ಥ ಪ್ರಾಣಿಯನ್ನು ಬಲಿ ಕೊಡಲಾಗುತ್ತದೆ. ಅದೇ ಪ್ರಾಣಿಯ ತೊಗಟೆಯಿಂದ ಹುಡುಗಿ ದೇಹವನ್ನು ಮುಚ್ಚಬೇಕು. ಈ ವೇಳೆ ಹುಡುಗಿಗೆ ಉಡುಗೊರೆ ನೀಡಲಾಗುತ್ತದೆ.
21 ವರ್ಷ ತುಂಬುವ ಆರು ತಿಂಗಳ ಮೊದಲು ತಯಾರಿ ನಡೆಯುತ್ತದೆ. ಸಾಂಪ್ರದಾಯಿಕ ಉಡುಪಿನಂತೆ ಟಾಪ್ ಲೆಸ್ ಆಗಿ ಹೋಗಿ, ಪ್ರಾಣಿ ಚರ್ಮ ಧರಿಸಬೇಕಾಗುತ್ತದೆ. ಜುಲು ಸಂಸ್ಕೃತಿಯಲ್ಲಿ, ಮದುವೆಗೆ ಮುಂಚಿನ ಲೈಂಗಿಕತೆಯನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ.