ತಮ್ಮ ಸ್ಫೋಟಕ ಬ್ಯಾಟಿಂಗ್‌ನಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆಂಕಿ ಪೋಸ್ಟ್‌ಗಳಿಂದ ಯಾವಾಗಲೂ ಸದ್ದು ಮಾಡುವ ವೀರೇಂದ್ರ ಸೆಹ್ವಾಗ್ ಹೋದ ಕಡೆಯೆಲ್ಲಾ ಮನರಂಜನೆಗೇನೂ ಕಮ್ಮಿ ಇಲ್ಲ.
ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕಂಡ ಅತ್ಯಂತ ಫ್ಯಾಶನಬಲ್ ಕ್ರಿಕೆಟರ್ ಯಾರು ಎಂದು ಸೆಹ್ವಾಗ್ ತಿಳಿಸಿದ್ದಾರೆ. ಅದು ಯುವರಾಜ್ ಸಿಂಗ್ ಅಥವಾ ಮಹೇಂದ್ರ ಸಿಂಗ್ ಧೋನಿಯಂತೂ ಅಲ್ಲ!
ಏಕದಿನ ಪಂದ್ಯಗಳಲ್ಲಿ ತಮ್ಮೊಂದಿಗೆ ಇನಿಂಗ್ಸ್ ಆರಂಭಿಸಲು ಬರುತ್ತಿದ್ದ ಸಚಿನ್ ತೆಂಡೂಲ್ಕರ್ ತಾವು ಕಂಡ ಅತ್ಯಂತ ಸ್ಟೈಲಿಶ್ ಕ್ರಿಕೆಟರ್ ಎಂದಿದ್ದಾರೆ ಸೆಹ್ವಾಗ್. ತಮ್ಮೆಲ್ಲರಿಗೂ ಬ್ರಾಂಡೆಡ್ ಬಟ್ಟೆಗಳ ಬಗ್ಗೆ ತಿಳಿಸಿಕೊಟ್ಟಿದ್ದೇ ಸಚಿನ್ ಎಂದು ಸೆಹ್ವಾಗ್ ತಿಳಿಸಿದ್ದಾರೆ.
BIG BREAKING: ಕಾಬೂಲ್ ಏರ್ ಪೋರ್ಟ್ ನಿಂದ 150 ಭಾರತೀಯರ ಅಪಹರಣ
ಇದೇ ವೇಳೆ ನೆಹ್ರಾ ಕುರಿತು ಮಾತನಾಡಿದ ಸೆಹ್ವಾಗ್, “ನಮ್ಮ ಅವಧಿಯಲ್ಲಿ ನೆಹ್ರಾ ಬರೀ ರೀಬಾಕ್ ಟೀ-ಶರ್ಟ್‌ಗಳು ಮತ್ತು ಶಾರ್ಟ್ಸ್ ಮಾತ್ರ ಹಾಕಿಕೊಳ್ಳುತ್ತಿದ್ದರು. ಆದರೆ ಅವರ ಲೈಫ್ ಈಗ ಪೂರ್ತಿ ಬದಲಾಗಿದೆ. ಆತನಿಗೆ ಆರಂಭದಲ್ಲಿ ಅಂಥದ್ದೊಂದು ಪುಶ್ ಬೇಕಿತ್ತು. ಸಚಿನ್ ಈ ವಿಚಾರದಲ್ಲಿ ನಮ್ಮನ್ನೆಲ್ಲಾ ಗೈಡ್ ಮಾಡಿದ್ದಾರೆ,” ಎಂದು ತಿಳಿಸಿದ್ದಾರೆ ಸೆಹ್ವಾಗ್.
2009ರ ಮುಂಬಯಿ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ 293 ರನ್‌ಗಳಿಸಿದ ಸೆಹ್ವಾಗ್ ಮೂರನೇ ಟೆಸ್ಟ್ ತ್ರಿಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡಿದ್ದರ ಕುರಿತು ಮಾತನಾಡಿದ ಮುರಳೀಧರನ್, “ಮುಂಬಯಿಯಲ್ಲಿ ಆತ ನಮ್ಮ ವಿರುದ್ಧ 290 ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಿದ್ದು ನನಗೆ ನೆನಪಿದೆ. ಮಾರನೇ ದಿನ 300 ರನ್‌ಗಳಿಸಬಹುದು, ಸುಮ್ಮನೇ ಕ್ರೀಸ್‌ಗೆ ಕಚ್ಚಿಕೊಂಡು ಇರು ಎಂದು ಸೆಹ್ವಾಗ್‌ಗೆ ದ್ರಾವಿಡ್ ಹೇಳಿದ್ದರು ಅನಿಸುತ್ತೆ. ಮಾರನೇ ದಿನ ಬೆಳಿಗ್ಗೆ ಆತ ಹಾಗೇ ಚೆಂಡನ್ನು ತಳ್ಳಲು ಹೋಗಿ ನನ್ನ ಬೌಲಿಂಗ್‌ನಲ್ಲಿ ಕಾಟ್ ಅಂಡ್ ಬೌಲ್ಡ್ ಆದರು. ರಾಹುಲ್ ಮಾತನ್ನು ನಾನು ಕೇಳಲೇಬಾರದಿತ್ತು ಎಂದ ಸೆಹ್ವಾಗ್, ನಿನ್ನ ಬೌಲಿಂಗ್ ಎದರು ಆಕ್ರಮಣಾಕಾರಿ ಆಟವಾಡಬೇಕಿತ್ತು ಎಂದರು,’ ಎಂದಿದ್ದಾರೆ.