ನವದೆಹಲಿ : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.ಇದು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಕೊಹ್ಲಿ ಹೊರಗುಳಿಯಲು ಪ್ರಮುಖ ಕಾರಣವಾಗಿದೆ.
ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಗಳು ಬಹಳ ಸಮಯದಿಂದ ಹರಿದಾಡುತ್ತಿದೆ. ಬಾಲಿವುಡ್ ನಟಿ ಕೆಲವೇ ದಿನಗಳಲ್ಲಿ ಲಂಡನ್ ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಹೊಸ ಮಗು ಜನಿಸಲಿದೆ! ಶ್ರೇಷ್ಠ ಕ್ರಿಕೆಟ್ ತಂದೆಯಂತೆ ಮಗು ಭಾರತವನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ಯುತ್ತದೆ, ಅಥವಾ ಅದು ತಾಯಿಯನ್ನು ಅನುಸರಿಸಿ ಚಲನಚಿತ್ರ ತಾರೆಯಾಗುತ್ತದೆಯೇ? ಎಂದು ಗೊತ್ತಿಲ್ಲ, ಆದರೆ ಈ ಮಗು ಲಂಡನ್ ನಲ್ಲಿ ಹುಟ್ಟುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಕೊಹ್ಲಿ-ಅನುಷ್ಕಾ ದಂಪತಿ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.