alex Certify ವಿರಾಟ್ ಕೊಹ್ಲಿ ಕೈ ತಪ್ಪಲಿದ್ಯಾ ನಾಯಕ ಪಟ್ಟ…..? ರೇಸ್ ನಲ್ಲಿದ್ದಾರೆ 3 ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್ ಕೊಹ್ಲಿ ಕೈ ತಪ್ಪಲಿದ್ಯಾ ನಾಯಕ ಪಟ್ಟ…..? ರೇಸ್ ನಲ್ಲಿದ್ದಾರೆ 3 ಆಟಗಾರರು

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಾಯಕತ್ವ ಸಾಭೀತುಪಡಿಸಲು ಕಡಿಮೆ ಸಮಯವಿದೆ. 2021 ಟಿ 20 ವಿಶ್ವಕಪ್, 2022 ಟಿ 20 ವಿಶ್ವಕಪ್ ಮತ್ತು 2023 ಏಕದಿನ ವಿಶ್ವಕಪ್‌ಗಳಲ್ಲಿ ಭಾರತಕ್ಕೆ ಒಂದೇ ಒಂದು ಟ್ರೋಫಿ ಬಂದಿಲ್ಲವೆಂದಾದ್ರೆ ಕೊಹ್ಲಿ ನಾಯಕತ್ವ ಕಳೆದುಕೊಳ್ಳಲಿದ್ದಾರೆ.

2023 ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ 35ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಹೊಸ ನಾಯಕನ ಹುಡುಕಾಟ ಭಾರತಕ್ಕೆ ಅನಿವಾರ್ಯವಾಗಿದೆ. ಕೊಹ್ಲಿ ನಂತ್ರ ರೇಸ್ ನಲ್ಲಿ ಮೂವರು ಆಟಗಾರರ ಹೆಸರಿದೆ.

ರಿಷಬ್ ಪಂತ್, ಟೀಂ ಇಂಡಿಯಾದ ಮುಂದಿನ ನಾಯಕರಾಗುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಪಂತ್ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಕಾರಣದಿಂದಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅವರ ಸ್ಥಾನ ಭದ್ರವಾಗಿದೆ. ರಿಷಭ್ ಪಂತ್, ನಾಯಕರಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾಗ ಪಂತ್ ಉತ್ತಮ ಕೆಲಸ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವಾಡಿದ ಶುಭ್ಮನ್ ಗಿಲ್, ಅತ್ಯುತ್ತಮ ಪ್ರದರ್ಶನ ನೀಡಿ, ಭಾರತದ ಗೆಲುವಿಗೆ ಕಾರಣವಾಗಿದ್ದರು. 2019 ರ ದೇವಧರ್ ಟ್ರೋಫಿಯಲ್ಲಿ ಶುಭಮನ್ ಗಿಲ್ ನಾಯಕತ್ವ ನಿಭಾಯಿಸಿದ್ದರು. ಭಾರತ ಸಿ ತಂಡದ ನಾಯಕರಾಗಿದ್ದಾಗ, ಗಿಲ್ ಮೊದಲ ಪಂದ್ಯದಲ್ಲಿಯೇ 143 ರನ್ ಗಳ ಅದ್ಭುತ ಶತಕ ಗಳಿಸಿದ್ದರು. 2023 ರ ವಿಶ್ವಕಪ್ ನಂತರ ಶುಭಮನ್ ಗಿಲ್ ಭಾರತೀಯ ತಂಡದ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಮುಂಬೈನ 26 ವರ್ಷದ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ 2017 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸಿದರು. ಅಯ್ಯರ್, ಐಪಿಎಲ್ 2018 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗಿದ್ದರು. ಈ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್, ವಿಶ್ವಕಪ್ 2023 ರ ನಂತರ ಭಾರತ ತಂಡದ ನಾಯಕತ್ವಕ್ಕೆ ಹೊಣೆ ಹೊರುವ ಸಾಧ್ಯತೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...