
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರೀತಿ, ಮದುವೆ ಸಾಕಷ್ಟು ಸುದ್ದಿ ಮಾಡಿದೆ. ಆ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತ ಜೋಡಿ ಅಭಿಮಾನಿಗಳ ಅಚ್ಚುಮೆಚ್ಚಿನ ಜೋಡಿ ಎನ್ನಿಸಿಕೊಂಡಿದ್ದಾರೆ. ಪ್ರತಿಯೊಂದು ಸಂದರ್ಭದಲ್ಲೂ ಪರಸ್ಪರ ಒಟ್ಟಿಗಿರುವ ಜೋಡಿ ಡಿಸೆಂಬರ್ 11,2017ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ವಿರಾಟ್-ಅನುಷ್ಕಾ ಮದುವೆ ಸಂದರ್ಭದ ವಿಡಿಯೋ ಒಂದು ಈಗ ವೈರಲ್ ಆಗಿದೆ. ಅನುಷ್ಕಾ ಶರ್ಮಾರಿಗಾಗಿ ವಿರಾಟ್ ಕೊಹ್ಲಿ ಹಾಡು ಹಾಡಿದ್ದಾರೆ. ಈ ಹಾಡು ಕೇಳಿದ ಅನುಷ್ಕಾ ಭಾವುಕರಾಗಿದ್ರು. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಮೇರಿ ಮೆಹಬೂಬ್ ಕಯಾಮತ್ ಹೋಗಿ ಎಂಬ ಹಾಡು ಹಾಡ್ತಿದ್ದಾರೆ.
ವಿರಾಟ್ ಕೊಹ್ಲಿ ಹಾಡಿಗೆ ಮೊದಲು ಭಾವುಕರಾದ ಅನುಷ್ಕಾ ನಂತ್ರ ವಾವ್ ಎನ್ನುತ್ತಾರೆ. ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದ್ದು,ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ವಿರುಷ್ಕಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಜೂನ್ 18ರಿಂದ ಟೆಸ್ಟ್ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಇಂಗ್ಲೆಂಡ್ ತಲುಪಿದೆ. ವಿರಾಟ್ ಜೊತೆ ಅನುಷ್ಕಾ ಹಾಗೂ ಮಗಳು ಇಂಗ್ಲೆಂಡ್ ಗೆ ತೆರಳಿದ್ದಾರೆ.