ಜೀವನ್ಮಾನದ ಲಯದಲ್ಲಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ರನ್ನು ಕಟ್ಟಿಹಾಕಲು ಪ್ಲಾನ್ ಒಂದನ್ನು ಆಂಗ್ಲರ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್ ಶೇರ್ ಮಾಡಿದ್ದಾರೆ.
“ರೂಟ್‌ರನ್ನು ಔಟ್ ಮಾಡಲು ಆಫ್‌ಸೈಡ್‌ನಿಂದ ಹೊರಗೆ ಐದನೇ ಸ್ಟಂಪ್ ಮೇಲೆ ಬೌಲಿಂಗ್ ಮಾಡಬೇಕು. ಎರಡನೇ ಟೆಸ್ಟ್‌ನಲ್ಲಿ ಆತನ ವಿಕೆಟ್ ಪಡೆಯಲು ವಿರಾಟ್ ಕೊಹ್ಲಿ ಮಾಡಿದ್ದ ಪ್ಲಾನ್ ಅನ್ನು ಜಸ್ಪ್ರೀತ್ ಬುಮ್ರಾ ಚೆನ್ನಾಗಿ ಅನುಷ್ಠಾನಕ್ಕೆ ತಂದರು. ರೂಟ್ ವಿರುದ್ಧ ವಿರಾಟ್ ಮತ್ತೆ ಪ್ಲಾನ್ ಮಾಡಬೇಕು. ಪುಲ್ ಶಾಟ್ ಚೆನ್ನಾಗಿ ಆಡುವ ರೂಟ್ ವಿರುದ್ಧ ಶಾರ್ಟ್ ಪಿಚ್ ಬೌಲಿಂಗ್ ಮಾಡಬೇಡಿ” ಎಂದ ಪನೇಸರ್, “ರೂಟ್ ಕ್ರೀಸ್‌ಗೆ ಬರುತ್ತಲೇ ವಿರಾಟ್ ಬುಮ್ರಾರನ್ನು ಬೌಲಿಂಗ್‌ಗೆ ಇಳಿಸಬೇಕು. ಬುಮ್ರಾ ಹಾಗೂ ಸಿರಾಜ್ ಇಬ್ಬರೂ ಸಹ ಬ್ಯಾಟ್ಸ್‌ಮನ್ ಮೇಲೆ ಮೊದಲಿಂದಲೇ ಒತ್ತಡ ಹೇರಬಲ್ಲ ಸಮರ್ಥರು. ಇದೇ ಕೆಲಸವನ್ನು ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಮಾಡುವ ಮೂಲಕ ರೂಟ್ ವಿಕೆಟ್ ಪಡೆದಿದ್ದಾರೆ” ಎಂದಿದ್ದಾರೆ.
ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಎಂದೂ ಹೋಲಿಕೆ ಮಾಡಬೇಡಿ
“ರೂಟ್‌ಗೆ ಹತಾಶೆ ಬಂದು ತಮ್ಮ ಸ್ಥಾನ ಬದಲಿಸಿಕೊಳ್ಳುವಂತೆ ಮಾಡಬೇಕು. ಅವರು ಲಯದಲ್ಲಿ ಬ್ಯಾಟ್ ಮಾಡಲು ಇಷ್ಟಪಡುತ್ತಾರೆ. ಆ ಲಯ ಇಲ್ಲದೇ ಇದ್ದಲ್ಲಿ, ಅವರು ತಮ್ಮ ಆಟದ ಪ್ಲಾನ್ ಮತ್ತು ಸ್ಥಾನ ಬದಲಿಸುತ್ತಾರೆ. ಭಾರತಕ್ಕೆ ಇದೇ ಬೇಕಿರುವುದು. ಭಾರತ ರೂಟ್‌ರನ್ನು ಬೇಗನೇ ಔಟ್ ಮಾಡಬಹುದು” ಎಂದು ಎಡಗೈ ನಿಧಾಗತಿಯ ಬೌಲರ್ ತಿಳಿಸಿದ್ದಾರೆ.