
ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 5ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. 2017 ರ ನವೆಂಬರ್ 11ರಂದು ಇಟಲಿಯಲ್ಲಿ ವಿವಾಹವಾಗಿದ್ದ ಈ ಜೋಡಿ ಐದನೇ ವರ್ಷದ ಮದುವೆ ವಾರ್ಷಿಕೋತ್ಸವದ ನೆಪದಲ್ಲಿ 7 ವಿಶೇಷ ಫೋಟೋಗಳನ್ನು ಶೇರ್ ಮಾಡಿದೆ. ಒಂದೊಂದು ಫೋಟೋ ಹಿಂದಿನ ಹಿನ್ನೆಲೆಯನ್ನೂ ಬರೆದುಕೊಂಡಿದ್ದಾರೆ.
ಜಾಹೀರಾತು ಸೆಟ್ ನಿಂದ ಪ್ರಾರಂಭವಾದ ಪ್ರೇಮಕಥೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುವ ತನಕ ಮುಂದುವರೆದಿತ್ತು. ಬಳಿಕ 2017 ರಲ್ಲಿ ಅಂದರೆ ನವೆಂಬರ್ 11 ರಂದು ವಿರಾಟ್, ಅನುಷ್ಕಾಗೆ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದರು.
ಮೊದಲಿಗೆ ಅನುಷ್ಕಾ ಶರ್ಮಾ ವಿಭಿನ್ನ ಕಥೆಗಳನ್ನು ಹೇಳುವ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಮೊದಲ ಫೋಟೋ ಅನುಷ್ಕಾ ಅವರ ಹಾರರ್ ಚಿತ್ರ ‘ಪರಿ’ ಯ ಫೋಟೋಶಾಪ್ ಮಾಡಿದ ಪೋಸ್ಟರ್ ಆಗಿದ್ದು, ಇದರಲ್ಲಿ ಅನುಷ್ಕಾ ಹಿಂದೆ ವಿರಾಟ್ ನಿಂತಿದ್ದಾರೆ. “ವಿರಾಟ್ ಯಾವಾಗಲೂ ತಮ್ಮ ಪಕ್ಕದಲ್ಲಿ ನಿಲ್ಲುತ್ತಾರೆ ಎಂದು ನನಗೆ ತಿಳಿದಿದೆ” ಎಂದು ಬರೆದಿದ್ದಾರೆ.
ಎರಡನೇ ಫೋಟೋ ಒಂದು ಮುದ್ದಾದ ಸೆಲ್ಫಿಯಾಗಿದ್ದು, ಇಬ್ಬರೂ ಪರಸ್ಪರರ ಬಾಂಧವ್ಯವನ್ನು ಇಷ್ಟಪಡುತ್ತೇವೆ. ಇಬ್ಬರೂ ತಮ್ಮನ್ನು ತಾವು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇವೆ” ಎಂದು ಅನುಷ್ಕಾ ಬರೆದಿದ್ದಾರೆ. ನಂತರ, ನಾವಿಬ್ಬರೂ ನಂಬಲಾಗದಷ್ಟು ಅದೃಷ್ಟಶಾಲಿಗಳು. ಅದು ಶಾಶ್ವತವಾಗಿರಲಿ.. ಅದಕ್ಕೆ ನನ್ನ ಕೃತಜ್ಞತೆ ಎಂದೂ, ಟೀ ಕಪ್ ಮೇಲೆ ವಿರುಷ್ಕಾ…… ಇಬ್ಬರದ್ದು ಅತ್ಯುತ್ತಮ ಅಭಿರುಚಿ ಎಂದೂ, ನೀನು ಸದಾ ನನ್ನ ಬೆನ್ನ ಹಿಂದೆ ಇರುವೆ ಎಂದು ನನಗೆ ತಿಳಿದಿದೆ ಎಂದೂ ವಿವಿಧ ಚಿತ್ರಗಳನ್ನು ಶೇರ್ ಮಾಡಿ ಬರೆಯಲಾಗಿದೆ.