
ನವದೆಹಲಿ: ದುಬೈ ಅಂತರರಾಷ್ಟ್ರೀಯ ಮೈದಾನದಲ್ಲಿ ಭಾರತ ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ.
ಗೆಲುವಿನ ನಂತರ, ಹಿರಿಯ ಬ್ಯಾಟ್ಸ್ ಮನ್ ಗಳಾದ ರೋಹಿತ್ ಮತ್ತು ವಿರಾಟ್ ವಿಕೆಟ್ ಹಿಡಿದುಕೊಂಡು ದಾಂಡಿಯಾ ನೃತ್ಯ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ, ಕಳೆದ ದಶಕದಲ್ಲಿ ಭಾರತ ಹಲವಾರು ಟ್ರೋಫಿ ಗೆದ್ದಿದೆ. 2024 ರಲ್ಲಿ ಅವರು ಟಿ 20 ವಿಶ್ವಕಪ್ ಅನ್ನು ಒಟ್ಟಿಗೆ ಗೆದ್ದರು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಒಟ್ಟಿಗೆ ಆಡಿ ಯಶಸ್ವಿಯಾಗಿದ್ದಾರೆ.
ಭಾರತ ತಂಡದಲ್ಲಿ ಅಪಾರ ಪ್ರತಿಭಾವಂತರು ಇದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ತಂಡ ಗೆಲ್ಲಲು ಯಾರಾದರೂ ಮುಂದೆ ಬರುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ. ಅನುಭವವನ್ನು ಯುವಕರೊಂದಿಗೆ ಹಂಚಿಕೊಳ್ಳಲು ಸಂತೋಷಪಡುತ್ತೇನೆ ಮತ್ತು ಅದು ಭಾರತೀಯ ತಂಡವನ್ನು ಅತ್ಯಂತ ಬಲಿಷ್ಠವಾಗಿಸುತ್ತದೆ ಎಂದು ಹೇಳಿದ್ದಾರೆ.
. @nightchanges pic.twitter.com/hTXDBjUx1v
— saif media (@saifmedia_) March 9, 2025