ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿರಾಟ್ ಕೊಹ್ಲಿ, ಏಳು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದು, ಈ ಅವಧಿಯಲ್ಲಿ ಭಾರತದ ಟೆಸ್ಟ್ ತಂಡದ ಶ್ರೇಷ್ಠ ನಾಯಕರೆನಿಸಿಕೊಂಡಿದ್ದಾರೆ.
1. 2014ರ ಡಿಸೆಂಬರ್‌ನಲ್ಲಿ ಕ್ರಿಕೆಟ್‌ನ ಅತ್ಯಂತ ದೀರ್ಘಾವಧಿಯ ಮಾದರಿಯ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಬಂದ ಕೊಹ್ಲಿ, ಭಾರತ ತಂಡವನ್ನು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಿಂದ ಅಗ್ರ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಅಷ್ಟು ಮಾತ್ರವಲ್ಲದೇ, ಕೊಹ್ಲಿ ನಾಯಕತ್ವದಲ್ಲಿ ಸತತ ಐದು ವರ್ಷಗಳ ಕಾಲ ಟೀಂ ಇಂಡಿಯಾ ಅಗ್ರ ಸ್ಥಾನದಲ್ಲಿತ್ತು.
2. ಈ ಏಳು ವರ್ಷಗಳ ಅವಧಿಯಲ್ಲಿ ತವರು ನೆಲದಲ್ಲಿ ಆಯೋಜಿಸಲಾದ ದ್ವಿಪಕ್ಷೀಯ ಟೆಸ್ಟ್ ಸರಣಿಗಳಲ್ಲಿ ಒಂದೇ ಒಂದು ಸರಣಿಯನ್ನೂ ಭಾರತ ಸೋತಿಲ್ಲ. ಕೊಹ್ಲಿ ಸಾರಥ್ಯದಲ್ಲಿ ಭಾರತದಲ್ಲಿ ಆಡಿದ 11 ಟೆಸ್ಟ್ ಸರಣಿಗಳಲ್ಲಿ ಎಲ್ಲದರಲ್ಲೂ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. 2021ರಲ್ಲಿ ಸೌಥಾಂಪ್ಟನ್‌ನಲ್ಲಿ ಆಯೋಜಿಸಲಾಗಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಷ್ಯಾದ ದಿಗ್ಗಜರು ಕೊಹ್ಲಿ ನಾಯಕತ್ವದಡಿ ಭಾಗಿಯಾಗಿದ್ದರು .
3. ವಿದೇಶೀ ನೆಲದಲ್ಲಿ ಭಾರತ ತಂಡ ತೋರಿದ ಅತ್ಯತ್ತಮ ಸಾಧನೆಗಳು ಕೊಹ್ಲಿ ಸಾರಥ್ಯದಡಿ ಮೂಡಿ ಬಂದಿವೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಿದ ಏಷ್ಯಾದ ತಂಡವೊಂದರ ಮೊದಲ ನಾಯಕ ಕೊಹ್ಲಿ (2018). ಇದರೊಂದಿಗೆ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಸರಣಿ ಗೆಲುವಿನಲ್ಲೂ ಕೊಹ್ಲಿ ಸಾರಥ್ಯವಿದೆ. 2021ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಆಯೋಜಿಸಲಾಗಿದ್ದ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮುಂದೂಡಲ್ಪಡದೇ ಇದ್ದಲ್ಲಿ ಕೊಹ್ಲಿ ಪಡೆ ಅಲ್ಲೂ ಸರಣಿ ಗೆಲುವು ಕಂಡು ಬರಬಹುದಿತ್ತು. ಈ ವರ್ಷದ ಜುಲೈಗೆ ಸರಣಿಯ ಕೊನೆಯ ಪಂದ್ಯ ಮುಂದೂಡಿದ ವೇಳೆ ಕೊಹ್ಲಿ ಸಾರಥ್ಯದ ಭಾರತದ ತಂಡ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು.
4. ತಂಡವನ್ನು ಮುನ್ನಡೆಸಿದೆ 68 ಟೆಸ್ಟ್‌ಗಳಲ್ಲಿ 40ರಲ್ಲಿ ಗೆಲುವು ಸಾಧಿಸಿರುವ ವಿರಾಟ್ ಕೊಹ್ಲಿ, ಭಾರತ ಮಾತ್ರವಲ್ಲ ಕ್ರಿಕೆಟ್ ಲೋಕದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಗ್ರೇಮ್ ಸ್ಮಿತ್ (53), ರಿಕಿ ಪಾಂಟಿಂಗ್ (48 ಗೆಲುವು) ಮತ್ತು ಸ್ಟೀವ್ ವಾ (41 ಗೆಲುವು) ಮಾತ್ರವೇ ಕೊಹ್ಲಿಗಿಂತ ಈ ಪಟ್ಟಿಯಲ್ಲಿ ಮುಂದಿದ್ದಾರೆ.
5. ನಾಯಕನಾಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆಯೂ ಕೊಹ್ಲಿಯದ್ದು (5,864 ರನ್).
6. ಭಾರತ ತಂಡದ ನಾಯಕನಾಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚಿನ ಶತಕ ಗಳಿಕೆಯ ವಿರಾಟ ದಾಖಲೆಯೂ ಅವರದ್ದೇ (20 ಶತಕ).
7. ಟೆಸ್ಟ್ ಇತಿಹಾಸದ ಯಾವುದೇ ತಂಡದ ನಾಯಕರ ಪೈಕಿ ಅತಿ ಹೆಚ್ಚು ದ್ವಿಶತಕ (7) ಗಳಿಸಿದ ಸಾಧನೆ.
8. ಭಾರತ ಟೆಸ್ಟ್ ತಂಡದ ನಾಯಕರಾಗಿ ಬ್ಯಾಟಿಂಗ್‌ನಲ್ಲಿ ಅತ್ಯಂತ ಹೆಚ್ಚಿನ ಸರಾಸರಿ (54.8).