ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಜನರಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರಿಕೆಟಿಗರು ಸೇರಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸುವುದು ಮಾತ್ರವಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡುವುದು ಆಟಗಾರರಿಗೆ ಆದಾಯ ಹೆಚ್ಚಳಕಕ್ಕೆ ಕಾರಣವಾಗಿದೆ.
ಎಂಡೋರ್ಸ್‌ಮೆಂಟ್ ಡೀಲ್‌ಗಳು ಕ್ರಿಕೆಟಿಗರು ದೊಡ್ಡ ಹಣವನ್ನು ಮಾಡುವ ಮತ್ತೊಂದು ಮಾರ್ಗವಾಗಿದೆ. ಫಾರ್ಚೂನ್ ಇಂಡಿಯಾದ ವರದಿಯ ಪ್ರಕಾರ, ವಿರಾಟ್ ಕೊಹ್ಲಿ 2023-24 ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಕ್ರಿಕೆಟಿಗ ಮತ್ತು ಕ್ರೀಡಾಪಟುವಾಗಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕುತೂಹಲಕಾರಿಯಾಗಿ ಅವರು ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಇಬ್ಬರ ತೆರಿಗೆ ಸೇರಿದಷ್ಟು ತೆರಿಗೆಯನ್ನು ಪಾವತಿಸುತ್ತಾರೆ.
ವಿರಾಟ್ ಕೊಹ್ಲಿ 66 ಕೋಟಿ ರೂ. ಪಾವತಿಸುವ ಮೂಲಕ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 38 ಕೋಟಿ ರೂ. ತೆರಿಗೆ ಪಾವತಿಸಿದ ಎಂ.ಎಸ್. ಧೋನಿ, 28 ಕೋಟಿ ರೂ. ಪಾವತಿಸಿದ ಸಚಿನ್ ತೆಂಡೂಲ್ಕರ್ ೆರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಸೌರವ್ ಗಂಗೂಲಿ 23 ಕೋಟಿ ರೂ., ಹಾರ್ದಿಕ್ ಪಾಂಡ್ಯ (12 ಕೋಟಿ) ಮತ್ತು ರಿಷಬ್ ಪಂತ್ (10 ಕೋಟಿ) ನಂತರದ ಸ್ಥಾನಗಳಲ್ಲಿದ್ದಾರೆ.
FY 2023-24 ಕ್ಕೆ ಹೆಚ್ಚು ತೆರಿಗೆ ಪಾವತಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿ
ವಿರಾಟ್ ಕೊಹ್ಲಿ – 66 ಕೋಟಿ
ಎಂಎಸ್ ಧೋನಿ – 38 ಕೋಟಿ
ಸಚಿನ್ ತೆಂಡೂಲ್ಕರ್ – 28 ಕೋಟಿ
ಸೌರವ್ ಗಂಗೂಲಿ – 23 ಕೋಟಿ
ಹಾರ್ದಿಕ್ ಪಾಂಡ್ಯ – 12 ಕೋಟಿ
ರಿಷಬ್ ಪಂತ್ – 10 ಕೋಟಿ