ಭಾರತದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ, ಈ ವರ್ಷ ಅವರು ಸಾಮಾನ್ಯವಾಗಿ ಆಡುವಷ್ಟು ಕ್ರಿಕೆಟ್ ಆಡದಿರಬಹುದು. ಆದರೆ, ಇನ್ಸ್ಟಾಗ್ರಾಮ್ನಲ್ಲಿ ಅವರು ಇನ್ನೂ ಟಾಪ್ ನಲ್ಲಿರುವ ಭಾರತೀಯ ತಾರೆಯಾಗಿದ್ದಾರೆ. ವರದಿಯೊಂದರ ಪ್ರಕಾರ, 2023 ರಲ್ಲಿ ಬಿಡುಗಡೆ ಮಾಡಲಾದ ಇನ್ಸ್ಟಾಗ್ರಾಮ್ನಲ್ಲಿ, ಕೊಹ್ಲಿ ಹಾಕುವ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್ ಗೆ ರೂ. 11.45 ಕೋಟಿ ಪಡೆಯುತ್ತಾರಂತೆ.
ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದರೆ, ಅವರ ಸಾಂಪ್ರದಾಯಿಕ ಎದುರಾಳಿ ಲಿಯೋನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿ ಭಾರತದಲ್ಲೇ ಅಗ್ರಗಣ್ಯರಾಗಿದ್ದಾರೆ.
ರೊನಾಲ್ಡೊಗೆ ಸುಮಾರು 3.23 ಮಿಲಿಯನ್ ಡಾಲರ್ ಅಂದರೆ, 26.75 ಕೋಟಿ ರೂ. ಪಡೆದ್ರೆ, ಮೆಸ್ಸಿ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ 21.49 ಕೋಟಿ ರೂ. ಪಡೆಯುತ್ತಾರೆ.
ಜಾಗತಿಕವಾಗಿ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ತಾರೆ ಅಂದ್ರೆ ಅವರು ವಿರಾಟ್ ಕೊಹ್ಲಿ ಮಾತ್ರ. ವರದಿಯ ಪ್ರಕಾರ, ಅವರು ಇನ್ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್ಗೆ 1.38 ಮಿಲಿಯನ್ ಡಾಲರ್ ಅಂದ್ರೆ 11.45 ಕೋಟಿ ರೂ. ಪಡೆಯುತ್ತಾರೆ. ಪ್ರಸ್ತುತ ಅವರು ಇನ್ಸ್ಟಾಗ್ರಾಂನಲ್ಲಿ 256 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಪಟ್ಟಿಯಲ್ಲಿರುವ ಭಾರತೀಯರ ಪೈಕಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ನಂತರದ ಸ್ಥಾನದಲ್ಲಿದ್ದು, ಜಾಗತಿಕವಾಗಿ ನಂ. 29ನೇ ಸ್ಥಾನದಲ್ಲಿದ್ದಾರೆ. ವರದಿಯ ಪ್ರಕಾರ, ಚೋಪ್ರಾ ಪ್ರತಿ ಪೋಸ್ಟ್ಗೆ 4.40 ಕೋಟಿ ರೂ. ಪಡೆಯುತ್ತಾರೆ.