ಭಾರತೀಯ ಕ್ರಿಕೆಟ್ ನ ಟಿ20 ಹಾಗೂ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಇನ್ನು ಮುಂದೆ ಕೇವಲ ಟೆಸ್ಟ್ ತಂಡದ ನಾಯಕರಾಗಿ ಮಾತ್ರ ಉಳಿಯಲಿದ್ದಾರೆ. ಸೀಮಿತ ಓವರ್ ಗಳ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ರೋಹಿತ್ ಶರ್ಮಾ, ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿಯೇ ನಮ್ಮ ಲೀಡರ್. ನಮ್ಮ ತಂಡಕ್ಕೆ ವಿರಾಟ್ ಕೊಹ್ಲಿಯ ಅವಶ್ಯಕತೆ ತುಂಬಾ ಇದೆ. ಅವರ ಸಾಮರ್ಥ್ಯ ಹಾಗೂ ಬ್ಯಾಟಿಂಗ್ ಕೌಶಲ್ಯ ಭಾರತ ತಂಡಕ್ಕೆ ಅವಶ್ಯಕ. ಹೀಗಾಗಿಯೇ ಅವರು ನಮ್ಮ ತಂಡದ ಲೀಡರ್ ಇದ್ದಂತೆ. ಯಾವಾಗಲೂ ಅವರು ನಮ್ಮ ಲೀಡರ್ ಆಗಿಯೇ ಇರುತ್ತಾರೆ ಎಂದು ಹೇಳಿದ್ದಾರೆ.
ಹೃದಯಾಘಾತಕ್ಕೆ ಒಳಗಾಗುವ ಮುನ್ನ 30 ಜೀವಗಳ ರಕ್ಷಿಸಿದ ಬಸ್ ಚಾಲಕ.
ಕೊಹ್ಲಿ ಬ್ಯಾಟ್ಸಮನ್ ಗಳಿಗೆ ಈಗಲೂ ಆದರ್ಶವಾಗಿಯೇ ಇದ್ದಾರೆ. ಉತ್ತಮ ಸರಾಸರಿ ಇಟ್ಟುಕೊಂಡು ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಸಾಧ್ಯವಲ್ಲ. ಹೀಗಾಗಿ ಅವರ ಅನುಭವ ತಂಡಕ್ಕೆ ಹೆಚ್ಚಾಗಿದೆ ಎಂದು ರೋಹಿತ್ ಮನಬಿಚ್ಚಿ ಮಾತನಾಡಿದ್ದಾರೆ.
ಸಹಜವಾಗಿ ನಾಯಕತ್ವ ಇದ್ದಾಗ ಒತ್ತಡ ಹೆಚ್ಚಾಗಿಯೇ ಇರುತ್ತದೆ. ನಾಯಕತ್ವ ಇದ್ದ ವ್ಯಕ್ತಿಯ ಮೋಡಿ ಹೆಚ್ಚಾಗಿ ನಡೆಯುತ್ತಿರುವುದಿಲ್ಲ. ಇದಕ್ಕೆ ಕೊಹ್ಲಿ ಕೂಡ ಉದಾಹರಣೆ. ಅವರು ಕೂಡ ಒತ್ತಡದಲ್ಲಿ ಸರಿಯಾಗಿ ಬ್ಯಾಟ್ ಬೀಸದೆ ಅಭಿಮಾನಿಗಳ ಬೇಸರಕ್ಕೆ ಕಾರಣರಾಗಿರುತ್ತಿದ್ದರು. ಸದ್ಯ ಕೊಹ್ಲಿಗೆ ಒತ್ತಡ ಕಡಿಮೆಯಾಗಿದೆ.
ರನ್ ಹೊಳೆ ಹರಿಯಬಹುದು ಎಂದು ಕ್ರೀಡಾಭಿಮಾನಿಗಳು ಬಯಸುತ್ತಿದ್ದಾರೆ. ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಆ ಸಂದರ್ಭದಲ್ಲಿ ರನ್ ಮಷಿನ್ ಕೊಹ್ಲಿ, ಅಭಿಮಾನಿಗಳ ಆಸೆ ತಣಿಸಬಹುದೇ ಎಂಬುವುದನ್ನು ಕಾಯ್ದು ನೋಡಬೇಕಿದೆ.