ಟಿ-20 ವಿಶ್ವಕಪ್ ನಲ್ಲಿ ಭಾರತದ ಪಯಣ ಮುಗಿದಿದೆ. ಸೆಮಿಫೈನಲ್ ಗೂ ಮುನ್ನವೇ ಟೀಂ ಇಂಡಿಯಾ, ವಿಶ್ವಕಪ್ ನಿಂದ ಹೊರ ಬಿದ್ದಿದೆ. ಈ ಮೂಲಕ ನಾಯಕ ವಿರಾಟ್ ಕೊಹ್ಲಿ. ಟಿ20 ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ.
ವಿಶ್ವಕಪ್ ಗೂ ಮುನ್ನವೇ ಕೊಹ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ವಿರಾಟ್ ಕೊಹ್ಲಿ ಟಿ 20 ನಾಯಕತ್ವ ತೊರೆದ ನಂತ್ರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣದ ಮೂಲಕ ಕೊಹ್ಲಿಗೆ ಗೌರವ ತೋರಿಸಿದೆ.
ಐಸಿಸಿ ತನ್ನ ಟ್ವಿಟರ್ ಖಾತೆಯ ಕವರ್ ಪೇಜ್‌ನಲ್ಲಿ ವಿರಾಟ್ ಕೊಹ್ಲಿ ಟಿ20 ನಾಯಕತ್ವದ ಕೊನೆಯ ಪಂದ್ಯದ ಫೋಟೋ ಹಂಚಿಕೊಂಡಿದೆ. ವಿರಾಟ್ ಕೊಹ್ಲಿಗೆ ಐಸಿಸಿ ತೋರಿಸಿರುವ ಗೌರವ ಭಾರತೀಯ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಕೊಹ್ಲಿ,ನಾಯಕತ್ವದಿಂದ ಇಳಿಯುತ್ತಿದ್ದಂತೆ ಯಾರು ಮುಂದಿನ ನಾಯಕ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಕೊಹ್ಲಿ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ಇದಕ್ಕೆ ಸೂಕ್ತ ಎಂದಿದ್ದಾರೆ. ಹಾಗಾಗಿ ಮುಂದಿನ ನಾಯಕ ರೋಹಿತ್ ಶರ್ಮಾ ಎಂಬುದು ಸ್ಪಷ್ಟವಾಗಿದೆ.
ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ 20 ಕ್ರಿಕೆಟ್‌ನಲ್ಲಿ 50 ಪಂದ್ಯಗಳನ್ನಾಡಿದೆ. ಅದರಲ್ಲಿ 30 ಪಂದ್ಯ ಗೆದ್ದಿದೆ. 16 ಪಂದ್ಯದಲ್ಲಿ ಸೋತಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಒಂದೇ ಒಂದು ಐಸಿಸಿ ಪಂದ್ಯಾವಳಿಯನ್ನು ಗೆಲ್ಲಲಿಲ್ಲ.