
ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಆಟಕ್ಕೆ ಸೀಮಿತರಾಗಿಲ್ಲ. ಅವರಲ್ಲಿರುವ ಡ್ಯಾನ್ಸ್ ಪ್ರತಿಭೆಯನ್ನು ಆಗಾಗ್ಗೆ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ.
ಇದೀಗ ಅಲ್ಲು ಅರ್ಜುನ್ ಅಭಿನಯದ `ಪುಷ್ಪ’ ಚಿತ್ರದ ‘ಹೂ ಅಂಟಾವ ಮಾಮ, ಊಹೂ ಅಂಟಾವಾ’ ಚಿತ್ರದ ಅತ್ಯಂತ ಜನಪ್ರಿಯ ಹಾಡಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಇದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸದಸ್ಯ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಮದುವೆ ಪಾರ್ಟಿ. ಕಳೆದ ತಿಂಗಳು 27 ರಂದು ಮ್ಯಾಕ್ಸ್ ವೆಲ್ ವಿನಿ ರಾಮನ್ ಅವರನ್ನು ವಿವಾಹವಾಗಿದ್ದರು. ಐಪಿಎಲ್ ಟೂರ್ನಿಯಿಂದಾಗಿ ಅವರಿಗೆ ವಿವಾಹದ ಪಾರ್ಟಿ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಆರ್ ಸಿ ಬಿ, ಮ್ಯಾಕ್ಸ್ ವೆಲ್ ಗೆ ಪಾರ್ಟಿ ಆಯೋಜಿಸಿತ್ತು.
ಪಾರ್ಟಿ ಎಂದ ಮೇಲೆ ಅಲ್ಲಿ ಮೋಜು ಮಸ್ತಿ ಇರಲೇಬೇಕಲ್ಲಾ. ಎಲ್ಲಾ ಆಟಗಾರರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡಿದರು. ಇನ್ನೂ ಒಂದು ಹೆಜ್ಜೆ ಹೋದ ವಿರಾಟ್ ಕೊಹ್ಲಿ, ಪುಷ್ಪ ಚಿತ್ರದ ಹೂ ಅಂಟಾವಾ ಮಾಮ ಹಾಡು ಬರುತ್ತಿದ್ದಂತೆಯೇ ಸಹ ಆಟಗಾರರೊಂದಿಗೆ ಸಖತ್ ಸ್ಟೆಪ್ ಹಾಕತೊಡಗಿದರು. ಚಿತ್ರದಲ್ಲಿ ಅಲ್ಲು ಅರ್ಜುನ್ ಮಾಡಿದ ಡ್ಯಾನ್ಸ್ ರೀತಿಯಲ್ಲೇ ಕೊಹ್ಲಿ ಸ್ಟೆಪ್ ಹಾಕುವ ಮೂಲಕ ಎಲ್ಲರಿಗೂ ಮನರಂಜನೆ ನೀಡಿದರು.
ಈ ಡ್ಯಾನ್ಸ್ ನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪುಷ್ಪ ಚಿತ್ರದ ಪೇಜ್ ನಲ್ಲಿಯೂ ರೀಟ್ವೀಟ್ ಮಾಡಲಾಗಿದೆ.
https://twitter.com/anamikash009/status/1519534665941487616?ref_src=twsrc%5Etfw%7Ctwcamp%5Etweetembed%7Ctwterm%5E1519534665941487616%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fcricketnext%2Fnews%2Fvirat-kohli-grooves-to-samantha-prabhus-oo-antava-song-from-all-arjuns-pushpa-watch-viral-video-5068081.html