ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತ ತಂಡ ಮೂರನೇ ಪಂದ್ಯವಾಡಲು ಸಜ್ಜಾಗುತ್ತಿದೆ. ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ದಾಖಲೆಯೊಂದನ್ನು ಹಿಂದಿಕ್ಕಲು ಸಜ್ಜಾಗುತ್ತಿದ್ದಾರೆ.
ತವರಿನಲ್ಲಿ ಅತ್ಯಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಕೊಹ್ಲಿ ಹಾಗೂ ಧೋನಿ, ತಮ್ಮ ನೇತೃತ್ವದಲ್ಲಿ ಟೀಂ ಇಂಡಿಯಾಗೆ ತಲಾ 21 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇನ್ನೊಂದು ಪಂದ್ಯ ಗೆದ್ದಲ್ಲಿ ಈ ದಾಖಲೆ ಕೊಹ್ಲಿಗೆ ಸಂದಾಯವಾಗಲಿದೆ.
ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 317 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದ ಕೊಹ್ಲಿ ನೇತೃತ್ವದ ಪಡೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಹೊನಲು ಬೆಳಕಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.
ಯುವತಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ಬೆಚ್ಚಿಬಿದ್ದ ವೈದ್ಯರು…!
ಧೋನಿ ಹಾಗೂ ಕೊಹ್ಲಿ ಅಲ್ಲದೇ ಮೊಹಮ್ಮದ್ ಅಜರುದ್ದೀಣ್ (13 ಗೆಲುವು), ಸೌರವ್ ಗಂಗೂಲಿ (10) ಹಾಗೂ ಸುನೀಲ್ ಗಾವಸ್ಕರ್ (7) ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
ಇದೇ ವೇಳೆ, ಭಾರತದ ತಂಡದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ದಿಲೀಪ್ ವೆಂಗ್ಸರ್ಕರ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ಕೇವಲ 23 ರನ್‌ಗಳ ಅಗತ್ಯವಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್‌ಗಳಲ್ಲಿ ಒಟ್ಟಾರೆ ಸಾವಿರಕ್ಕೂ ಹೆಚ್ಚು ರನ್‌ಗಳಿಸಿದ ಶ್ರೇಯಕ್ಕೆ ಭಾಜನರಾಗಲು ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಅವರಿಗೆ 45 ರನ್‌ಗಳ ಅಗತ್ಯವಿದೆ.