ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಕ್ತಾಯದ ನಂತರ ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಅನ್ನು ಭೇಟಿಯಾಗಿದ್ದು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.
ಈ ವಿಡಿಯೋನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಡ್ಯಾನ್, ತಂಡದೊಂದಿಗೆ ‘ಸ್ಟಿರಿಯೊ ನೇಷನ್’ ಹಾಡಿನ ‘ಇಷ್ಕ್’ಗೆ ಹೆಜ್ಜೆ ಹಾಕಿದ್ದಾರೆ.
“ವಿರಾಟ್ ಕ್ವಿಕ್ ಸ್ಟೈಲ್ ಅನ್ನು ಭೇಟಿಯಾದಾಗ” ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇದುವರೆಗೂ ವಿಡಿಯೋ ಭಾರೀ ವೀಕ್ಷಣೆ ಕಂಡಿದೆ.
ವಿರಾಟ್ ಕೊಹ್ಲಿ ಮತ್ತು ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇದಕ್ಕೆ ಕೊಹ್ಲಿ ಪತ್ನಿ- ನಟಿ ಅನುಷ್ಕಾ ಶರ್ಮಾ ಬೆಂಕಿಯ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹಲವಾರು ಮಂದಿ ಕೊಹ್ಲಿ ನೃತ್ಯ ಯಾವುದೇ ಬಾಲಿವುಡ್ ಹೀರೋಗೂ ಕಡಿಮೆಯಿಲ್ಲ ಎಂದಿದ್ದಾರೆ.
https://youtu.be/O1ygtxRg_PI