ಅಹಮದಾಬಾದ್: ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) 8,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
ಅಹಮದಾಬಾದ್‌ನಲ್ಲಿ 2024ರ ಐಪಿಎಲ್ ಎಲಿಮಿನೇಟರ್‌ನಲ್ಲಿ ಆರ್‌ಆರ್ ವಿರುದ್ಧ ತನ್ನ 29 ನೇ ರನ್‌ನೊಂದಿಗೆ ಆರ್‌ಸಿಬಿ ಸ್ಟಾರ್ ಕೊಹ್ಲಿ ಈ ಮೈಲಿಗಲ್ಲನ್ನು ತಲುಪಿದರು. ಬೇರೆ ಯಾವುದೇ ಬ್ಯಾಟರ್ 7,000 ರನ್ ಗಳಿಸಿಲ್ಲ ಎಂಬುದು ಗಮನಾರ್ಹ. 2016 ರ ಋತುವಿನಲ್ಲಿ 973 ರನ್ ಗಳಿಸಿದ ನಂತರ 700 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ 2024 ರಲ್ಲಿ ಎರಡನೇ ಅತ್ಯಂತ ಉತ್ತಮ ಋತು ಹೊಂದಿರುವ ಕೊಹ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ.
RCB ಸತತ ಸೋಲುಗಳಿಂದ ಚೇತರಿಸಿಕೊಂಡು ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಅವರ ಬ್ಯಾಟಿಂಗ್ ಫಾರ್ಮ್ ಕೂಡ ಒಂದು ಪ್ರಮುಖ ಕಾರಣ, ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ.
ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 8 ಶತಕ ಮತ್ತು 55 ಅರ್ಧಶತಕಗಳನ್ನು ಗಳಿಸಿದ್ದಾರೆ. CSK ವಿರುದ್ಧದ ಕೊನೆಯ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಮುರಿದರು, 17 ಆವೃತ್ತಿಗಳಲ್ಲಿ ಒಂದು ಸ್ಥಳದಲ್ಲಿ(ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ) 3000 ರನ್‌ಗಳನ್ನು ತಲುಪಿದ ಮೊದಲ IPL ಬ್ಯಾಟರ್ ಎನಿಸಿಕೊಂಡರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಪ್ರಿಲ್ 18, 2008 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ RCB ಗಾಗಿ IPL ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಅವರು ಒಂದು ರನ್‌ಗೆ ಔಟಾಗಿದ್ದರು.