ಭಾರತ-ನ್ಯೂಜಿಲೆಂಡ್ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ತೆರಳಿದ್ದಾರೆ. ಈ ಮೂಲಕ ಕೊಹ್ಲಿ ಮುಜುಗರದ ದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕರಾಗಿ 10 ಬಾರಿ ಡಕ್ ಔಟ್ ಆಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಡಕ್ ಔಟ್ ಆದ ಟೆಸ್ಟ್ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಮೊದಲ ಸ್ಥಾನದಲ್ಲಿದ್ದಾರೆ. ಸ್ಟೀಫನ್ ಟೆಸ್ಟ್ ನಾಯಕರಾಗಿದ್ದಾಗ 13 ಬಾರಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇದರ ನಂತರ, ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೆ, ಇಂಗ್ಲೆಂಡ್‌ನ ಮೈಕೆಲ್ ಅಥರ್ಟನ್ ಮತ್ತು ಭಾರತದ ಎಂಎಸ್ ಧೋನಿ 8 ಬಾರಿ ಡಕ್ ಔಟ್ ಆಗಿ, ಮೂರನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಡಕ್ ಔಟ್ ಆದ ಟೆಸ್ಟ್ ನಾಯಕರ ಪಟ್ಟಿ :
ನ್ಯೂಜಿಲೆಂಡ್ ಆಟಗಾರ ಸ್ಟೀಫನ್ ಫ್ಲೆಮಿಂಗ್-13
ದಕ್ಷಿಣ ಆಫ್ರಿಕಾ ಆಟಗಾರ ಗ್ರೇಮ್ ಸ್ಮಿತ್-10
ಭಾರತದ ನಾಯಕ ವಿರಾಟ್ ಕೊಹ್ಲಿ-10
ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೆ-8
ಇಂಗ್ಲೆಂಡ್ ಆಟಗಾರ ಮೈಕೆಲ್ ಅಥರ್ಟನ್-8
ಭಾರತದ ಆಟಗಾರ ಎಂಎಸ್ ಧೋನಿ-8
ಇದಲ್ಲದೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನೊಂದು ಮುಜುಗರದ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿ 10 ಬಾರಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಭಾರತೀಯ ಟೆಸ್ಟ್ ನಾಯಕರ ಪಟ್ಟಿಯಲ್ಲೂ ಕೊಹ್ಲಿ ಸೇರಿದ್ದಾರೆ.
ಒಂದು ವರ್ಷದಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಭಾರತೀಯ ಟೆಸ್ಟ್ ನಾಯಕರ ಪಟ್ಟಿ :
ಬಿಶನ್ ಸಿಂಗ್ ಬೇಡಿ – 4 ಬಾರಿ (1976)
ಕಪಿಲ್ ದೇವ್ – 4 ಬಾರಿ (1983)
ಧೋನಿ – 4 ಬಾರಿ (2011)
ವಿರಾಟ್ ಕೊಹ್ಲಿ – 4 ಬಾರಿ (ವರ್ಷ 2021)