
ಮದುವೆ ಸಮಾರಂಭಗಳ ಸಂದರ್ಭದಲ್ಲಿ ವಧೂ ವರರ ಸ್ನೇಹಿತರು ಫನ್ನಿ ಕೆಲಸಗಳನ್ನು ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದರಲ್ಲಿ ಇಂಥದ್ದೇ ಘಟನೆ ನಡೆದಿದೆ.
ಸಾಂಪ್ರದಾಯಿಕ ಧಿರಿಸಿನಲ್ಲಿರುವ ಮದುಮಗ ಮದುಮಗಳಿಗೆ ಹಾರ ಹಾಕಬೇಕಿರುತ್ತದೆ. ಆದರೆ ಸರಿಯಾಗಿ ಈ ಕ್ಷಣದಲ್ಲೇ ತನ್ನ ಸ್ನೇಹಿತರು ಪ್ರಾಂಕ್ ಒಂದನ್ನು ಮಾಡಲಿದ್ದಾರೆ ಎಂಬ ಊಹೆಯೂ ಆತನಿಗೆ ಇರುವುದಿಲ್ಲ.
ವಧುವಿಗೆ ವರ ಹಾರ ಹಾಕುತ್ತಲೇ ಬಲೂನ್ನ ದೊಡ್ಡದೊಂದು ಸ್ಫೋಟದ ಸದ್ದು ಸುತ್ತಲಿನ ಗಾಳಿಯನ್ನು ಆವರಿಸುತ್ತದೆ. ಮಂಟಪದ ಮೇಲಿದ್ದ ಎಲ್ಲರಿಗೂ ಗಾಬರಿಯಾಗುತ್ತದೆ. ಇದು ಗನ್ಶಾಟ್ ಆಗಿರಬಹುದು ಎಂದು ವರ ಭಾವಿಸಿದಂತೆ ವಿಡಿಯೋದಲ್ಲಿ ಕಾಣುತ್ತದೆ.
ಆದರೆ ಈ ಚೇಷ್ಟೆಯನ್ನು ವರನ ಸ್ನೇಹಿತರು, ಕುಟುಂಬಸ್ಥರು ಹಾಗೂ ಮದುವೆ ಬಂದಿದ್ದ ಅತಿಥಿಗಳೆಲ್ಲಾ ಬಹಳ ಎಂಜಾಯ್ ಮಾಡಿದ್ದಾರೆ.
https://youtu.be/hR1vHmCp0r0