ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡಿದ ನಂತರ ಪರಿಚಾರಕಿಯ ಸೇವೆಯಿಂದ ಸಂತೋಷಗೊಂಡರೆ ಸಾಮಾನ್ಯವಾಗಿ ನೀವು ಎಷ್ಟು ಟಿಪ್ಸ್ ಕೊಡುತ್ತೀರಾ..? 50, 100, 200 ರೂ. ?? ಆದರೆ, ಯಾರಾದರೂ ಲಕ್ಷ ರೂ. ಟಿಪ್ಸ್ ಕೊಟ್ಟಿದ್ದನ್ನು ಎಂದಾದ್ರೂ ಕೇಳಿದ್ರಾ..?
ಹೌದು, ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿರುವ ಜಾಸ್ಮಿನ್ ಕ್ಯಾಸ್ಟಿಲ್ಲೋ ಎಂಬುವವರಿಗೆ ಅಪರಿಚಿತರಿಂದ 10 ಸಾವಿರ ಡಾಲರ್ ಅಂದರೆ ಸುಮಾರು 7 ಲಕ್ಷ ರೂ.ಗಳ ಟಿಪ್ಸ್ ದೊರೆತಿದೆ.
ರೀಟಾ ವಿಲಿಯಮ್ಸ್ ಎಂಬಾಕೆ ತನ್ನ ತಾಯಿಯೊಂದಿಗೆ ರೆಸ್ಟೋರೆಂಟ್ ಗೆ ತೆರಳಿದ್ದಳು. ಈ ವೇಳೆ ಪರಿಚಾರಕಿ ಮಾಡಿರುವ ಸೇವೆಯಿಂd ಸಂತುಷ್ಟಗೊಂಡ ಆಕೆ $ 20 ಅನ್ನು ಟಿಪ್ಸ್ ಆಗಿ ನೀಡಿದ್ದಾಳೆ. ಈಕೆ ಊಟ ಮಾಡಿದ್ದಕ್ಕೆ ಆಗಿರುವ ಮೊತ್ತ $30. ಆದರೆ, ಕ್ಯಾಸ್ಟಿಲ್ಲೊ ಅವರು ಒಂದೇ ಬಾರಿಗೆ ಅನೇಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದರೂ, ವೃತ್ತಿಪರ, ತುಂಬಾ ಕರುಣಾಮಯಿ, ತಾಳ್ಮೆಯಿಂದ ಉತ್ತಮ ಗ್ರಾಹಕ ಸೇವೆ ಒದಗಿಸಿದ್ದಕ್ಕೆ ಸಂತುಷ್ಟಗೊಂಡ ರೀಟಾ $ 20 ಅನ್ನು ಟಿಪ್ಸ್ ಆಗಿ ನೀಡಿದ್ದಾರೆ.
ದೊಡ್ಡ ಮೊತ್ತದ ಟಿಪ್ಸ್ ಸಿಕ್ಕಿದ್ದಕ್ಕೆ ಕ್ಯಾಸ್ಟಿಲ್ಲೊ ಕಣ್ಣೀಂದ ಕಣ್ಣೀರ ಕೋಡಿಯೇ ಹರಿದಿದೆ. ರೀಟಾ $ 20 ಟಿಪ್ಸ್ ಕೊಟ್ಟಿದ್ದಕ್ಕೆ ತುಂಬಾ ಕೃತಜ್ಞತಾ ಭಾವನೆ ವ್ಯಕ್ತಪಡಿಸಿದ್ದಾಳೆ. ಹೀಗಾಗಿ ಮತ್ತೆ ರೀಟಾ 20 ಡಾಲರ್ ಮೊತ್ತವನ್ನು ನೀಡಿದ್ದಾಳೆ.
ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ ರೀಟಾ ಹಂಚಿಕೊಂಡಿದ್ದಾಳೆ. ಬಳಿಕ ಕ್ಯಾಸ್ಟಿಲ್ಲೊ ಬಹಳ ಕಷ್ಟದಲ್ಲಿದ್ದು, ಆಕೆಗೆ ಎಲ್ಲರೂ ಸೇರಿ ಸಹಾಯ ಮಾಡಿದ್ರೆ ಅವಳ ಜೀವನಕ್ಕೆ ಉಪಯುಕ್ತವಾಗುತ್ತದೆ ಎಂದು ರೀಟಾ ವಿವರಿಸಿದ್ದಾಳೆ. ಹ್ಯಾಪಿ ಕಸ್ಟಮರ್ ಎಂಬ ಶೀರ್ಷಿಕೆ ಮೂಲಕ ಫೇಸ್ಬುಕ್ ನಲ್ಲಿ ರೀಟಾ ಪೋಸ್ಟ್ ಮಾಡಿದ್ದರು.
ವರದಿಗಳ ಪ್ರಕಾರ, ಈ ಪೋಸ್ಟ್ ಮಾಡಿದ ಕೇವಲ ಒಂದು ವಾರದೊಳಗೆ ಕ್ಯಾಸ್ಟಿಲ್ಲೊ $ 10,000 ( ಸುಮಾರು 7 ಲಕ್ಷ ರೂ.) ಕ್ಕಿಂತ ಹೆಚ್ಚು ಹಣವನ್ನು ಅಪರಿಚಿತರು ನೀಡಿದ್ದಾರೆ ಎನ್ನಲಾಗಿದೆ.