ಹೆಣ್ಣಿನ ಬದುಕಿನ ಪ್ರತಿ ಹಂತವನ್ನು ಅತ್ಯದ್ಭುತವಾಗಿ ಚಿತ್ರಿಸಿರುವ ಪೇಪರ್ ಆರ್ಟ್ ನಲ್ಲಿ ಅರಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹುಟ್ಟಿದಾಗಿನಿಂದ ಹಿಡಿದು ಜೀವನದ ಕೊನೇ ಕ್ಷಣದವರೆಗಿನ ಹೆಣ್ಣಿನ ಬದುಕಿನ ವಿವಿಧ ಹಂತಗಳನ್ನು ಅರ್ಥಪೂರ್ಣವಾಗಿ ಬಿಂಬಿಸುವ ಕೆಲವೇ ಕ್ಷಣಗಳ ಪೇಪರ್ ಆರ್ಟ್ ನ ಈ ದೃಶ್ಯ ಎಂಥವರನ್ನು ನಿಬ್ಬೆರಗಾಗುವಂತೆ ಮಾಡುವಂತಿದೆ.
ಸ್ತ್ರೀಯೊಬ್ಬಳು ಹುಟ್ಟಿದಾಗಿನಿಂದ ಬೆಳೆಯುವ ಹಂತ ಬಾಲ್ಯದಿಂದ ಹಿಡಿದು ವೃದ್ಧಾಪ್ಯದವರೆಗೆ…… ಬದುಕಿನ ಮುಸ್ಸಂಜೆಯಲ್ಲಿಯೂ ಆಕೆಯ ಜೀವನೋತ್ಸಾಹ ಹಾಗೂ ಜೀವನದ ಕೊನೇ ಕ್ಷಣದವರೆಗಿನ ವಿವಿಧ ಮಜಲುಗಳನ್ನು ಅದ್ಭುತವಾಗಿ ತೆರೆದಿಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ಒಂದು ಕ್ಷಣ ‘ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ….ಬೆಳಕನಿಟ್ಟು ತೂಗಿದಾಕೆ… ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ….?’ ಎಂಬ ಜಿ.ಎಸ್. ಶಿವರುದ್ರಪ್ಪನವರ ಹಾಡಿನ ಸಾಲುಗಳು ನೆನಪಾಗದೇ ಇರಲಾರದು.