ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಯುವಕನೊಬ್ಬ ಇನ್‌ಸ್ಟಾಗ್ರಾಮ್ ರೀಲ್ ಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಯುವಕ NH-344 ರಲ್ಲಿ 30 ಅಡಿ ಎತ್ತರದ ಹೈವೇ ಹೋರ್ಡಿಂಗ್ ಮೇಲೆ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ಸಾಹಸಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ ?
ಯುವಕ NH-344 ರಲ್ಲಿರುವ ಒಂದು ದೊಡ್ಡ ಹೋರ್ಡಿಂಗ್ ಮೇಲೆ ಹತ್ತುತ್ತಾನೆ. ಆ ಹೋರ್ಡಿಂಗ್ ನಲ್ಲಿ “ಸಹರಾನ್‌ಪುರ – 44 ಕಿಮೀ” ಎಂದು ಬರೆಯಲಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಸಹರಾನ್‌ಪುರವು NH-344 ರಲ್ಲಿ 44 ಕಿಮೀ ದೂರದಲ್ಲಿದೆ ಎಂದು ಬೋರ್ಡ್‌ನಲ್ಲಿ ಬರೆದಿರುವುದನ್ನು ಕಾಣಬಹುದು. ಯುವಕ ತನ್ನ ಸ್ನೇಹಿತರು ಕೆಳಗಿನಿಂದ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿರುವಂತೆ, ಅಪಾಯಕಾರಿಯಾಗಿ ತನ್ನ ಕೈಗಳನ್ನು ಮೇಲಕ್ಕೆತ್ತಿ ಸಾಹಸ ಪ್ರದರ್ಶಿಸುತ್ತಾನೆ.
ಪೊಲೀಸರು ವೈರಲ್ ವಿಡಿಯೋವನ್ನು ಗಮನಿಸಿ ತನಿಖೆ ನಡೆಸಲು ಆದೇಶಿಸಿದ್ದಾರೆ. “ಈ ವಿಷಯದಲ್ಲಿ, ಸಂಬಂಧಪಟ್ಟ ವ್ಯಕ್ತಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಸಾಹಸಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಸರ್ಕಾರವು ಈ ಅಪಾಯಕಾರಿ ಪ್ರವೃತ್ತಿಯನ್ನು ನಿಯಂತ್ರಿಸಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
सहारनपुर में युवाओं में रील बनाने का चढ़ा खुमार, NH 344 हाईवे के बोर्ड पर चढ़ कर युवक बना रहा रील
पोल पर चढ़कर जान की परवाह किए बिना बनाई रील, रील बनाकर युवक ने की इंस्टाग्राम पर वीडियो वायरल#Saharanpur @saharanpurpol @Uppolice pic.twitter.com/XKbdRw7dYg
— भारत समाचार | Bharat Samachar (@bstvlive) February 5, 2025