ಪ್ರತಿಷ್ಠಿತ ಆಸ್ಕರ್ ಗರಿ ಮೂಡಿಸಿಕೊಂಡಿರುವ ಆರ್‌ಆರ್‌ಆರ್ ಚಿತ್ರದ ’ನಾಟು ನಾಟು’ ಹಾಡಿನ ನೃತ್ಯವನ್ನೇ ನೆನಪಿಸುವ ರೀತಿಯ ಮತ್ತೊಂದು ನೃತ್ಯವನ್ನು ಕ್ಲಾಸಿಕ್ ಕಾಮಿಡಿ ಜೋಡಿ ’ಲಾರೆಲ್ & ಹಾರ್ಡಿ’ ಮಾಡಿರುವುದನ್ನು ನೆಟ್ಟಿಗರು ಕಂಡುಕೊಂಡಿದ್ದಾರೆ.
ಚಾರ್ಲಿ ಚಾಪ್ಲಿನ್ ಪ್ರದರ್ಶನಗಳಲ್ಲಿ ಖ್ಯಾತಿ ಪಡೆದಿರುವ ’ಲಾರೆಲ್ & ಹಾರ್ಡಿ’ ಈ ಸ್ಟೆಪ್‌ಗಳನ್ನು ಬಹಳ ವರ್ಷಗಳ ಹಿಂದೆಯೇ ಮಾಡಿರುವಂತೆ ಕಾಣುತ್ತದೆ.
ಈ ಕುರಿತು ಖುದ್ದು ರಾಜಮೌಳಿಯೇ ಮಾತನಾಡಿರುವುದು ನ್ಯೂಯಾರ್ಕ್ ಟೈಮ್ಸ್‌ನ ಅಂಕಣವೊಂದರಲ್ಲಿದ್ದು, ಪಾಶ್ಚಾತ್ಯ ಲೋಕದ ಚಾರ್ಲಿ ಚಾಪ್ಲಿನ್ ಹಾಗೂ ಟಾಮ್ ಅಂಡ್ ಜೆರ‍್ರಿಗಳ ಪ್ರಭಾವಗಳು ತಮ್ಮ ಚಿತ್ರದ ಹಾಡಿನ ನೃತ್ಯದಲ್ಲಿರುವುದಾಗಿ ಅವರು ಹೇಳಿಕೊಂಡಿದ್ದರು. ಇದೇ ವೇಳೆ ಹಾಡಿನ ಬೀಟ್ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಎಂಜಿಎಂನ ಸ್ವರ್ಣ ಯುಗದ ಕಾಲದ ಒಂದಷ್ಟು ಬೀಟ್‌ಗಳಿಂದ ಪ್ರೇರಣೆ ಪಡೆದಂತೆ ಇದೆ.
ಆಸ್ಕರ್ 2023ರ ಅತ್ಯುತ್ತಮ ಮೂಲ ಗಾಯನ ಪ್ರಶಸ್ತಿಯನ್ನು ಬಾಚಿಕೊಂಡ ’ನಾಟು ನಾಟು’ ಹಾಡು ಈ ಸಂಬಂಧ ಅಂತಿಮ ಸ್ಫರ್ಧೆಯಲ್ಲಿ ರಿಯಾನ್ನಾ, ಲೇಡಿ ಗಾಗಾ ಹಾಗೂ ಇನ್ನಿತರ ದೊಡ್ಡ ದೊಡ್ಡ ನಾಮಿನಿಗಳನ್ನು ಹಿಂದಿಕ್ಕಿತ್ತು.
ಪ್ರತಿಷ್ಠಿತ ಸ್ವರ್ಣ ಪ್ರತಿಮೆಯನ್ನು ಗೀತ ರಚನೆಕಾರ ಎಂ ಎಂ ಕೀರವಾಣಿ ಹಾಗೂ ಲಿರಿಸಿಸ್ಟ್ ಚಂದ್ರಬೋಸ್ ಸ್ವೀಕರಿಸಿದ್ದರು.