ಹುಡುಗರು ಎಲ್ಲವನ್ನು ಏಕೆ ಆನಂದಿಸಬೇಕು ? ಎಂದು ಜಾಹಿರಾತಿನ ಒಂದು ಪ್ರಸಂಗ ಗಮನಿಸಿರಬಹುದು. ಆ ಜಾಹಿರಾತಲ್ಲಿ ಸ್ಕೂಟರ್ ಸವಾರಿ ಮಾಡುವ ಮಹಿಳೆಯರು ಮೋಜು ಮಾಡುವುದನ್ನು ಕಾಣಬಹುದು.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮಹಿಳೆಯರು ದ್ವಿಚಕ್ರ ವಾಹನಗಳನ್ನು ಓಡಿಸುವುದು ಸಾಮಾನ್ಯವಾಗಿದೆ. ಸಲ್ವಾರ್- ಸೂಟ್ಗಳು ಮತ್ತು ಸಾಂಪ್ರದಾಯಿಕ ಸೀರೆ ಧರಿಸುವ ಮಹಿಳೆಯರು ಕೂಡ ಸ್ಕೂಟರ್ ಮತ್ತು ಮೋಟಾರ್ ಬೈಕ್ ಓಡಿಸುತ್ತಾರೆ.
ಇದಕ್ಕೊಂದು ಉದಾಹರಣೆಯಾಗಿ ಇಬ್ಬರು ಮಹಿಳೆಯರು ಸೀರೆಯುಟ್ಟುಕೊಂಡು ಮಧ್ಯರಾತ್ರಿಯಲ್ಲಿ ರಸ್ತೆಯಲ್ಲಿ ಬುಲೆಟ್ ಬೈಕ್ ಓಡಿಸುವ ವಿಡಿಯೋ ವೈರಲ್ ಆಗಿದೆ.
ಬೈಕ್ ಚಲಾಯಿಸುತ್ತಿದ್ದ ಮಹಿಳೆ ಘುಂಘಾಟ್ನೊಂದಿಗೆ ಕಿತ್ತಳೆ ಬಣ್ಣದ ಸೀರೆಯುಟ್ಟಿದ್ದರೆ ಹಿಂಬದಿ ಕುಳಿತಿದ್ದ ಮಹಿಳೆ ಮೆಜೆಂಟಾ ಬಣ್ಣದ ಸೀರೆ ಧರಿಸಿದ್ದರು.
ಅವರಿಬ್ಬರು ಬೈಕ್ ಸವಾರಿ ಆನಂದಿಸುತ್ತಿರುವುದನ್ನು ಅಪರಿಚಿತರು ಚಿತ್ರೀಕರಿಸಿದ್ದು, ಇದನ್ನು ಕಂಡು ಇಬ್ಬರು ಮಹಿಳೆಯರು ನಗುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಇನ್ ಸ್ಟಾ ಗ್ರಾಮ್ನಲ್ಲಿ 940ಕೆ ವೀಕ್ಷಣೆ ಮತ್ತು 57ಕೆ ಲೈಕ್ಗಳೊಂದಿಗೆ ವೈರಲ್ ಆಗಿದೆ.