alex Certify ಬೆಳಗ್ಗೆ ಬೇಗ ಏಳಬೇಕೆಂದು ಮಲಗುವ ಮುನ್ನವೇ ಮೇಕಪ್‌…! ಅಮೆರಿಕದಲ್ಲೊಬ್ಬ ʼಸೋಮಾರಿʼ ಸುಂದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ ಬೇಗ ಏಳಬೇಕೆಂದು ಮಲಗುವ ಮುನ್ನವೇ ಮೇಕಪ್‌…! ಅಮೆರಿಕದಲ್ಲೊಬ್ಬ ʼಸೋಮಾರಿʼ ಸುಂದರಿ

ಬೆಳಗ್ಗೆ ಬೇಗ ಎದ್ದೇಳುವುದು, ಎದ್ದು ಯಾವುದೇ ಚಟುವಟಿಕೆಯಲ್ಲಿ ತೊಡಗುವುದು ಎಂದರೆ ಬಹುತೇಕ ಜನರಿಗೆ ಕಷ್ಟದ ಕೆಲಸವೇ. ಇದಕ್ಕೆ ಅವರು ನೀಡುವ ಕಾರಣಗಳು, ನೆಪಗಳು ಹಲವಾರು ಇರುತ್ತವೆ.

ಇದಕ್ಕೆ ನಿದರ್ಶನ ಎಂಬಂತೆ ಅಮೆರಿಕದಲ್ಲೊಬ್ಬ ಯುವತಿಯು ಬೆಳಗ್ಗೆ ಬೇಗ ಎದ್ದೇಳಬೇಕಲ್ಲ ಎಂಬ ಒಂದೇ ಒಂದು ಕಾರಣಕ್ಕೆ ರಾತ್ರಿಯೇ ಮೇಕಪ್‌ ಮಾಡಿಕೊಂಡು ಮಲಗುವ ರೂಢಿ ಮಾಡಿಕೊಳ್ಳುವ ಮೂಲಕ ಸೋಮಾರಿತನದ ಪರಮಾವಧಿ ಮೆರೆಯುತ್ತಿದ್ದಾಳೆ.

ಹೌದು, ಅಮೆರಿಕದ ಕೆಂಟುಕಿ ನಿವಾಸಿಯಾಗಿರುವ ಟೀಚರ್‌ ಹನ್ನಾ ಎಂಬ ಯುವತಿಯು ಟಿಕ್‌ಟಾಕ್‌ ಸ್ಟಾರ್‌ ಆಗಿದ್ದು, ಸಾವಿರಾರು ಫಾಲೋವರ್‌ಗಳನ್ನು ಹೊಂದಿದ್ದಾರೆ.

ಇವರು ಬೆಳಗ್ಗೆ ಎದ್ದ ತಕ್ಷ ಣ ಟಿಕ್‌ಟಾಕ್‌ ವಿಡಿಯೊ ಮಾಡುವುದು ಸೇರಿ ಹಲವಾರು ಅಭ್ಯಾಸಗಳನ್ನು ಹೊಂದಿದ್ದಾರೆ. ಆದರೆ, ಬೆಳಗ್ಗೆ ಬೇಗ ಎದ್ದೇಳಲು ಆಗದ್ದನ್ನು ಅರಿತ ಈಕೆ ರಾತ್ರಿ ಮಲಗುವ ಮುನ್ನವೇ ಮೇಕಪ್‌ ಮಾಡಿಕೊಂಡು, ಲಿಪ್‌ಸ್ಟಿಕ್‌ ಹಚ್ಚಿಕೊಂಡು, ಕೂದಲನ್ನು ನೀಟಾಗಿ ಬಾಚಿಕೊಂಡು ಮಲಗುತ್ತಾರೆ. ಬೆಳಗ್ಗೆ ತಮಗೆ ಇಷ್ಟ ಬಂದ ಸಮಯಕ್ಕೆ ಎದ್ದಕೂಡಲೇ ಟಿಕ್‌ಟಾಕ್‌ ವಿಡಿಯೊ ಮಾಡಿ, ಪೋಸ್ಟ್‌ ಮಾಡುವ ಮೂಲಕ ಜನರನ್ನು ರಂಜಿಸುತ್ತಾಳೆ.

ಜೋ ಬೈಡೆನ್ ಸಂಪುಟ ಸೇರಿದ ಮತ್ತೋರ್ವ ಭಾರತೀಯ ಮೂಲದ ಪ್ರಜೆ

ತಮ್ಮ ಮೇಕಪ್‌ ರಹಸ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹನ್ನಾ ಅವರೇ ಮಾಹಿತಿ ಹಂಚಿಕೊಂಡಿದ್ದು, ನೂರಾರು ಅಭಿಮಾನಿಗಳು ಇವರ ಐಡಿಯಾವನ್ನು ಮೆಚ್ಚಿದ್ದರೆ, ಒಂದಷ್ಟು ಜನ ಇದು ಸೋಮಾರಿತನದ ಪರಮಾವಧಿ ಎಂದು ಕುಟುಕಿದ್ದಾರೆ. ಹಾಗಂತ, ಹನ್ನಾ ಅವರು ಇದನ್ನು ಒಂದೆರಡು ದಿನ, ತಿಂಗಳಿಂದ ಪಾಲಿಸುತ್ತಿಲ್ಲ. ಕಳೆದ ಹತ್ತು ವರ್ಷಗಳಿಂದಲೂ ಹೀಗೆಯೇ ರಾತ್ರಿ ಮಲಗುವ ಮುನ್ನ ಮೇಕಪ್‌ ಮಾಡಿಕೊಳ್ಳುವ ರೂಢಿ ಹಾಕಿಕೊಂಡಿದ್ದಾರೆ. ಆ ಮೂಲಕ ಬೆಳಗ್ಗಿನ ಸುಖ ನಿದ್ರೆಯನ್ನು ಅನುಭವಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...