
ತನ್ನ ಕಾಫಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬಳು ತೀರ ಅಸಹನೆಗೊಂಡಿದ್ದಾಳೆ. ಕಾಫಿಗೆ ಐದು ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಿಬ್ಬಂದಿ ಹೇಳಿದಾಗ, ಆಕೆ ಕೋಪಗೊಂಡಿದ್ದಾಳೆ. ಅಲ್ಲೇ ಇದ್ದ ಟ್ರೇಗಳು ಮತ್ತು ಟೇಬಲ್ ಮಾರ್ಕರ್ ಗಳನ್ನು ತೆಗೆದುಕೊಂಡು ನೆಲದ ಮೇಲೆ ಬೀಳಿಸಿದ್ದಾಳೆ.
ಮುತ್ತಿನನಗರಿಯಲ್ಲಿ ಭಾರಿ ಮಳೆಗೆ ಇಬ್ಬರು ನಾಪತ್ತೆ: ಕೊಚ್ಚಿ ಹೋದ ಪಿಕ್ ಅಪ್ ವಾಹನ
ಮಹಿಳೆಯ ಅವಾಂತರಕ್ಕೆ ನೊಂದ ಸಿಬ್ಬಂದಿ ಪೊಲೀಸ್ ದೂರು ನೀಡುವುದಾಗಿ ಹೇಳಿದ್ದಕ್ಕೆ, ತನ್ನ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗಿದೆ ಎಂದಿದ್ದಾಳೆ. ಸ್ವತಃ ಆಕೆಯೇ ತನ್ನ ಪ್ರತಿಕೂಲ ನಡವಳಿಕೆಯನ್ನು ದೂಷಿಸಿದ್ದಾಳೆ.
ಮಹಿಳೆ ಬೀಳಿಸಿದ ಟೇಬಲ್ ಟ್ರೇಗಳನ್ನು ಎತ್ತಿಡಲು ಸಿಬ್ಬಂದಿಗೆ ಸಹಾಯ ಮಾಡಿದ ಟಿಕ್ ಟೋಕರ್ ಸಿಜೆ, ಈ ಘಟನೆಯನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “ಸ್ಲೋ ಮೋಶನ್ ಕರೇನ್, ಅವಳ ಮಧುಮೇಹ ಅದನ್ನು ಮಾಡಿದೆ. ಕಾಫಿಯು ತುಂಬಾ ಸಮಯ ತೆಗೆದುಕೊಂಡಿತು” ಎಂದು ಸಿಜೆ ಬರೆದಿದ್ದಾರೆ.
ಮಹಿಳೆಗೆ ಕಚ್ಚಿದ ವಿಷಕಾರಿ ಜೇಡ…..ಆಮೇಲಾಗಿದ್ದು ಘನಘೋರ..!
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಅಸಭ್ಯ ವರ್ತನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, “ಜನರು ಏಕೆ ವಯಸ್ಕರಂತೆ ವರ್ತಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬರು “ಕಳೆದ ಬಾರಿ ನನ್ನ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾದಾಗ ನಾನು ಬ್ಯಾಂಕನ್ನು ಲೂಟಿ ಮಾಡಿದೆ, ಅದು ನಿಜವಾಗಿಯೂ ಜನರ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.