
ಯುವತಿಯು ತನ್ನ ನಾಯಿಮರಿಯೊಂದಿಗೆ ನೀರಿನ ದಡದ ಬಳಿ ನಡೆದುಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ಮೊಸಳೆಯು ದಡದ ಬಳಿಗೆ ಬಂದಿದೆ. ಆದರೂ ಹೆದರದ ಯುವತಿ ಗಟ್ಟಿಯಾಗಿ ಅಲ್ಲೇ ನಿಂತಿದ್ದಾಳೆ. ಅಲ್ಲದೆ ತನ್ನ ಕಾಲಿನಿಂದ ಚಪ್ಪಲಿ ತೆಗೆದು ಮೊಸಳೆಯತ್ತ ಬಡಿದಿದ್ದಾಳೆ. ಮೊಸಳೆ ಹೆದರಿ ಓಡಿದಂತೆ, ಹಿಂದೆ ಹಿಂದೆ ಹೋಗಿದೆ. ಮೊಸಳೆ ಹಿಂದೆ ಹೋಗುತ್ತಿದ್ದಂತೆ ಮತ್ತಷ್ಟು ಧೈರ್ಯ ತಂದುಕೊಂಡ ಮಹಿಳೆ ಚಪ್ಪಲಿಯನ್ನು ಮತ್ತೆ ಬೀಸುತ್ತಾ ಹೆದರಿಸಿದ್ದಾಳೆ.
ಈ ವಿಡಿಯೋವನ್ನು ಆಸ್ಟ್ರೇಲಿಯಾದ ಉತ್ತರದ ಕಾಕಡು ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿದೆ. ಮಾಜಿ ಎನ್‌ಬಿಎ ಆಟಗಾರ ರೆಕ್ಸ್ ಚಾಪ್‌ಮನ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಘಟನೆ 2016ರಲ್ಲಿ ನಡೆದಿದ್ದರೂ ಈ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ಮತ್ತೆ ವೈರಲ್ ಆಗಿದೆ. ವಿಡಿಯೋವನ್ನು 1.4 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಭಾರಿ ವೈರಲ್ ಆಗಿದೆ.