
ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ಫೋನ್‌ನೊಂದಿಗೆ ಕುಳಿತಿರುವುದನ್ನು ಕ್ಲಿಪ್ ತೋರಿಸುತ್ತದೆ. ಉಳಿದೆಲ್ಲವೂ ಸಹಜವೆಂಬಂತೆ ಭಾಸವಾಗಿದ್ದರೂ, ಒಂದು ದೊಡ್ಡ ಹೆಬ್ಬಾವು ಅಲ್ಲಿಗೆ ಬರುತ್ತದೆ. ಹಾವು ಭಯಾನಕವಾಗಿದೆ. ಯುವತಿಯ ತೊಡೆಯ ಮೇಲೆ ಅದು ತೆವಳುತ್ತದೆ. ಆದರೆ ಯುವತಿ ಸ್ವಲ್ಪವೂ ವಿಚಲಿತಳಾಗುವುದಿಲ್ಲ.
ದೊಡ್ಡ ಹೆಬ್ಬಾವನ್ನು ಸಾಕುನಾಯಿ ಅಥವಾ ಬೆಕ್ಕಿನಂತೆ ಪರಿಗಣಿಸುವ ಈಕೆಯನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ಇದು 2.63 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಇದನ್ನು ನಂಬಲು ಸಾಧ್ಯವೇ ಇಲ್ಲ ಎಂದು ಹಲವರು ಕಮೆಂಟ್ಮಾಡಿದ್ದಾರೆ.