
ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಸಾಮಾಜಿಕ ಮಾಧ್ಯಮದಿಂದಾಗಿ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈಗ ಮಹಾಬಲೇಶ್ವರದ ಬೀದಿಗಳಲ್ಲಿ ಮಹಿಳೆಯೊಬ್ಬರು ಲತಾ ಮಂಗೇಶ್ಕರ್ ಅವರ ‘ಸುನೋ ಸಜನಾ ಪಪಿಹೆ ನೇ’ ಹಾಡನ್ನು ಹಾಡುವ ವೀಡಿಯೊ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೀವು ಸಂಗೀತ ಪ್ರೇಮಿಯಾಗಿದ್ದರೆ, ಮಹಿಳೆ ಹಾಡುವ ಈ ವಿಡಿಯೋ ಅನ್ನು ಖಂಡಿತವಾಗಿಯೂ ಇಷ್ಟಪಡುತ್ತೀರಿ.
ಈ ವಿಡಿಯೋವನ್ನು ಸೈಯದ್ ಸಲ್ಮಾನ್ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಕಿರು ವಿಡಿಯೋದಲ್ಲಿ ಮಹಿಳೆಯು 1966 ರ ಹಾಡನ್ನು ಹಾಡುವುದನ್ನು ಕೇಳಬಹುದು.
ಆಕೆಯ ಧ್ವನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮಹಾಬಲೇಶ್ವರದ ಪಂಚಗಣಿಯಲ್ಲಿರುವ ಪಾರ್ಸಿ ಪಾಯಿಂಟ್ ಬಳಿ ಮಹಿಳೆ ನಿಂತು ಹಾಡುತ್ತಿರುವ ಹಾಡು ಇದಾಗಿದೆ.ಬಜನರು ಆಕೆಯ ಧ್ವನಿಯಿಂದ ಸಂಪೂರ್ಣವಾಗಿ ಪ್ರಭಾವಿತರಾಗಿದ್ದಾರೆ. ಸಹಸ್ರಾರು ಮಂದಿ ದನಿಯನ್ನು ಮೆಚ್ಚಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂಥವರಿಗೆ ಚಿತ್ರಗಳಲ್ಲಿ ಹಾಡಲು ಅವಕಾಶ ಕೊಡಬೇಕು ಎಂದಿದ್ದಾರೆ.