alex Certify ಟೆರೆಸ್​ ಮೇಲೆ ಮಹಿಳೆಯ ಅದ್ಬುತ ನೃತ್ಯ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆರೆಸ್​ ಮೇಲೆ ಮಹಿಳೆಯ ಅದ್ಬುತ ನೃತ್ಯ; ವಿಡಿಯೋ ವೈರಲ್

‘ನೃತ್ಯ’ ಎಂಬ ಪದವು ಜನರ ಜೀವನದಲ್ಲಿ ತರುವ ಸಂತೋಷದ ಕುರಿತು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿದಿನ, ಬಹಳಷ್ಟು ನೃತ್ಯ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಏಕೆಂದರೆ ನೃತ್ಯದಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಜನರು ಇದನ್ನು ನೋಡಲು ತುಂಬಾ ಇಷ್ಟಪಡುತ್ತಾರೆ.

ಅಂತಹ ಒಂದು ವಿಡಿಯೋ ಜಾಲತಾಣದಲ್ಲಿ ಈಗ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಟೆರೇಸ್‌ ಮೇಲೆ ‘ರಂಗಿಲೋ ಮಾರೋ ಧೋಲ್ನಾ’ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. ನೀಲಿ ಬಣ್ಣದ ಸೀರೆಯುಟ್ಟು ಈ ಜನಪ್ರಿಯ ಹಾಡಿನಲ್ಲಿ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆಕೆಯ ಶಕ್ತಿಯ ಮಟ್ಟ ಮತ್ತು ನೃತ್ಯದ ಚಲನೆಗಳು ಅದ್ಭುತವಾಗಿವೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನೃತ್ಯದ ಉದ್ದಕ್ಕೂ, ತಮ್ಮ ಮುಖದಲ್ಲಿನ ಸುಂದರವಾದ ನಗುವಿನ ಮೂಲಕ ಮಹಿಳೆ ಗಮನ ಸೆಳೆದಿದ್ದಾರೆ.

ವಿಡಿಯೋ ಇದಾಗಲೇ 38 ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಕಂಡಿದ್ದು, ಥರಹೇವಾರಿ ಕಮೆಂಟ್ಸ್​ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...