
ಈ ಪ್ರಕರಣದಲ್ಲಿ ಚಾಲಕ ದೂರು ನೀಡಿದರೆ ನಾವು ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪಶ್ಚಿಮ ಪಟೇಲ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ವಿಡಿಯೋದಲ್ಲಿ ಮಹಿಳೆಯ ಸ್ಕೂಟಿಯ ನಂಬರ್ ಪ್ಲೇಟ್ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದನ್ನೇ ಆಧರಿಸಿದ ಪೊಲೀಸರು ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ. ನೀಲಿ ಬಣ್ಣದ ಟಿ ಶರ್ಟ್ ಧರಿಸಿರುವ ಮಹಿಳೆಯು ಚಾಲಕನಿಗೆ ಥಳಿಸಿದ್ದಾಳೆ. 2 ನಿಮಿಷದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕ್ಯಾಬ್ ಚಾಲಕನಿಗೆ ಥಳಿಸುತ್ತಿದ್ದ ವೇಳೆ ಕೆಲವರು ಮಹಿಳೆಯ ನಡೆಯನ್ನು ವಿರೋಧಿಸಿದ್ದರೆ ಇನ್ನೂ ಕೆಲವರು ಮೊಬೈಲ್ ಕ್ಯಾಮರಾದ ಮೂಲಕ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು.
ಯುವತಿಯ ಜೊತೆಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಂಚಾರ ದಟ್ಟಣೆ ಹೊಂದಿದ್ದ ರಸ್ತೆಯಲ್ಲಿ ಸಿಲುಕಿದ್ದಳು. ರಸ್ತೆಯಲ್ಲಿ ಮುಂದೆ ಹೋಗಲು ಕ್ಯಾಬ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಹಿಳೆಯು ಸ್ಕೂಟಿ ಇಳಿದು ಬಂದು ಕ್ಯಾಬ್ ಚಾಲಕನಿಗೆ ಥಳಿಸಿದ್ದಾಳೆ ಎನ್ನಲಾಗಿದೆ.