
ಸಾಮಾನ್ಯವಾಗಿ ಸೆಲೆಬ್ರಿಟಿಗಳ ವಿಡಿಯೋಗಳನ್ನು ಜನರು ಹೆಚ್ಚೆಚ್ಚು ಬಾರಿ ವೀಕ್ಷಣೆ ಮಾಡ್ತಾರೆ. ಸಿನಿಮಾ ಟ್ರೇಲರ್, ಸಾಂಗ್ ಗಳು ಹೆಚ್ಚು ವೈರಲ್ ಆಗ್ತವೆ. ಇತ್ತೀಚಿನ ದಿನಗಳಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳು ರಾತ್ರೋರಾತ್ರಿ ಪ್ರಸಿದ್ಧಿಗೆ ಬರ್ತಾರೆ. ಅವ್ರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಪಡೆಯುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಸಿಗಲಿ ಎನ್ನುವ ಕಾರಣಕ್ಕೆ ಜನಸಾಮಾನ್ಯರು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮಕ್ಕಳು ಏನೂ ಮಾಡಬೇಕಿಲ್ಲ. ಇದಕ್ಕೆ ಈ ಬಾಲಕ ಸಾಕ್ಷಿ. ಪುಟ್ಟ ಬಾಲಕನ ವಿಡಿಯೋ ಒಂದು 12 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.
ಇಷ್ಟೊಂದು ಜನರು ಈ ವಿಡಿಯೋ ನೋಡಲು ಕಾರಣವೇನು? ಅಂಥ ವಿಷ್ಯ ಈ ವಿಡಿಯೋದಲ್ಲಿ ಏನಿದೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ವಿಡಿಯೋದಲ್ಲಿ ಬಾಲಕನ ಲುಕ್ ಜನರಿಗೆ ಇಷ್ಟವಾಗಿದೆ. ಆತನ ಡ್ರೆಸ್ ಹಾಗೂ ಆತನ ಸ್ಟೈಲ್ ಜನರನ್ನು ಆಕರ್ಷಿಸಿದೆ. ಮಕ್ಕಳು ಹೇಗಿದ್ದರೂ ಚಂದ. ಅದ್ರಲ್ಲೂ ಸ್ವಲ್ಪ ಬೆಳ್ಳಗೆ, ದಪ್ಪಗಿದ್ದರೆ ಎಲ್ಲರೂ ಮಗುವನ್ನು ಇಷ್ಟಪಡ್ತಾರೆ. ವಿಡಿಯೋದಲ್ಲಿರುವ ಮಗು ಕೂಡ ತುಂಬ ಮುದ್ದಾಗಿದೆ. ಈ ಡ್ರೆಸ್ ನಲ್ಲಿ ಮತ್ತಷ್ಟು ಮುದ್ದಾಗಿ ಕಾಣುತ್ತದೆ. ಇದೇ ಈ ವಿಡಿಯೋ ಇಷ್ಟೊಂದು ವೈರಲ್ ಆಗಲು ಕಾರಣ.
https://www.instagram.com/p/CMhxSXlHJQi/?utm_source=ig_embed&utm_campaign=embed_video_watch_again