ಪಶ್ಚಿಮ ಬಂಗಾಳದ ಬಿರ್ಭುಂಮ್‌ನ ಕಡಲೇಕಾಯಿ ವ್ಯಾಪಾರಿಯೊಬ್ಬರು ತಮ್ಮ ವ್ಯಾಪಾರಕ್ಕಾಗಿ ವಿಶೇಷವಾದ ಹಾಡೊಂದನ್ನು ರಚಿಸಿದ್ದಾರೆ. ಕಡಲೇಕಾಯಿ ಮಾರಲೆಂದು ಸೈಕಲ್ ತುಳಿಯುತ್ತಾ ಊರೂರು ಸುತ್ತುವ ಭೂಬನ್ ಬಡ್ಯಾಕರ್, ಈ ಹಾಡು ಹೇಳುತ್ತಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
“ಕಡ್ಲೇಕಾಯ್ ಕಡ್ಲೇಕಾಯ್….. ಬಡವರ ಬಾದಾಮಿ ಈ ಕಡ್ಲೇಕಾಯ್” ಎಂದು ಕನ್ನಡದ ಹಳೆಯ ಹಾಡಿನ ಹಾಗೆ ’ಬಾದಾಮ್ ಬಾದಾಮ್ ಕಚ್ಚಾ ಬಾದಾಮ್’ ಎಂದು ಭೂಬನ್ ಹಾಡುತ್ತಾ ತಮ್ಮಲ್ಲಿ ಕಡಲೇಕಾಯಿ ಖರೀದಿ ಮಾಡಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ರೈಲ್ವೆ ದುರಂತದಲ್ಲಿ ಮೃತ ಪಟ್ಟಿದ್ದನೆನ್ನಲಾದ ವ್ಯಕ್ತಿ 11 ವರ್ಷಗಳ ನಂತ್ರ ಜೀವಂತವಾಗಿ ಪತ್ತೆ…!
ಬೈಸಿಕಲ್ ಮೇಲೆ ಬರಿಗಾಲಿನಲ್ಲೇ ಸಂಚರಿಸುವ ಭೂಬನ್, ಹಿಂದಕ್ಕೊಂದು ಬಿಳಿಯ ಚೀಲವೊಂದರಲ್ಲಿ ಕಡಲೇಕಾಯಿ ತುಂಬಿಕೊಂಡು ಮಾರುತ್ತಾ ಸಾಗುತ್ತಾರೆ. ಜೊತೆಗೊಂದು ತಕ್ಕಡಿಯನ್ನು ಒಯ್ಯುತ್ತಾ ಕಡಲೇ ಕಾಯಿ ಮಾರುವ ಭೂಬನ್ ಸಾಮಾಜಿಕ ಜಾಲತಾಣದಲ್ಲಿ ಅನೇಕ್ ಮ್ಯಾಶಪ್‌ಗಳಿಗೆ ಸರಕಾಗಿದ್ದಾರೆ.
https://youtu.be/qcUi0UcZhRY