ಹಿಂದೂ ಸಂಪ್ರದಾಯಗಳಲ್ಲಿ ನಡೆಯುವ ಮದುವೆಗಳಲ್ಲಿ ಶಾಸ್ತ್ರಕ್ಕೇನು ಬರಗಾಲವಿಲ್ಲ. ಸಾಲು ಸಾಲು ಶಾಸ್ತ್ರಗಳನ್ನು ಪೂರೈಸುವಲ್ಲಿಯೇ ವಧು – ವರರ ಕುಟುಂಬಸ್ಥರು ಸುಸ್ತಾಗಿಬಿಡ್ತಾರೆ. ಇದೇ ರೀತಿ ಮದುವೆ ಕಾರ್ಯಕ್ರಮದಲ್ಲಿ ಶಾಸ್ತ್ರಗಳನ್ನು ಪೂರೈಸುವ ವೇಳೆ ನಡೆದ ಘಟನೆಯೊಂದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಧು – ವರರು ಮದುವೆ ಶಾಸ್ತ್ರದಲ್ಲಿ ನಿರತರಾಗಿದ್ದರು. ಮದುವೆ ಸಂಪ್ರದಾಯದ ಭಾಗವಾಗಿ ಕೆಂಪು ಬಣ್ಣದ ಶಾಲನ್ನು ವಧು ವರರ ತಲೆ ಮೇಲೆ ಇಡಲಾಗಿತ್ತು. ಶಾಲಿನ ಒಂದು ತುದಿಯಲ್ಲಿ ವರನ ಸಂಬಂಧಿಗಳು ಹಾಗೂ ಇನ್ನೊಂದು ತುದಿಯಲ್ಲಿ ನಿಂತ ವಧುವಿನ ಸಂಬಂಧಿಗಳು ಶಾಲನ್ನು ಎಳೆಯುತ್ತಿದ್ದರು. ವರನ ಕುಟುಂಬಸ್ಥರು ಶಾಲನ್ನು ತುಸು ಜೋರಾಗಿಯೇ ಎಳೆದಿದ್ದಾರೆ. ಇದರಿಂದ ವಧುವಿನ ಕಡೆಯ ಮಹಿಳೆ ಹಾಗೂ ಇಬ್ಬರು ಪುರುಷರು ಮದುವೆ ಮಂಟಪದಲ್ಲಿ ಹಾಕಲಾಗಿದ್ದ ಯಜ್ಞ ಕುಂಡದ ಮೇಲೆ ಬಿದ್ದಿದ್ದಾರೆ. ಮಹಿಳೆ ಹೇಗೋ ಬೆಂಕಿಯಿಂದ ಪಾರಾಗಿದ್ದಾರೆ. ಆದರೆ ಪುರುಷನ ಕೈ ಅಗ್ನಿ ಕುಂಡದೊಳಗೆ ಹೋಗಿದೆ.
ಮೂವರಿಗೂ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಅದೃಷ್ಟ ಒಂದು ಕೈಕೊಟ್ಟಿದ್ದರೆ ದೊಡ್ಡ ಅನಾಹುತವೇ ನಡೆದು ಹೋಗಿಬಿಡಬಹುದಿತ್ತು. ಮದುವೆ ಸಮಾರಂಭದಲ್ಲಿ ತಮಾಷೆ ಇರಬೇಕು. ಆದರೆ ತಮಾಷೆಯಿಂದ ಯಾರ ಜೀವ ಹಾನಿಯಾಗದಂತೆ ನೋಡಿಕೊಳ್ಳುವುದು ಉತ್ತಮ ಅನ್ನೋದು ವಿಡಿಯೋ ನೋಡಿದ ನೆಟ್ಟಿಗರ ಅಭಿಪ್ರಾಯವಾಗಿದೆ.
https://www.instagram.com/reel/CS7HgzgJ9Lu/?utm_source=ig_web_copy_link
https://www.instagram.com/reel/CS7HgzgJ9Lu/?utm_source=ig_embed&ig_rid=116da16f-6f4d-480c-8bfb-b9f324d82806