ಲಾಂಡ್ರಿ ಅಂಗಡಿಯಲ್ಲಿ ವಾಶಿಂಗ್ ಮಷಿನ್ ಗೆ ಬೆಂಕಿ ಹೊತ್ತಿಕೊಂಡಿದ್ದು ವ್ಯಕ್ತಿಯೊಬ್ಬ ಭೀಕರ ಘಟನೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವಾಶಿಂಗ್ ಮಷಿನ್ ಗೆ ಬೆಂಕಿ ಹೊತ್ತಿ ಸ್ಫೋಟಗೊಳ್ಳುವ ಕೆಲ ಕ್ಷಣಗಳ ಮುನ್ನ ವ್ಯಕ್ತಿಯೊಬ್ಬ ಅಂಗಡಿಯಿಂದ ಹೊರನಡೆದಿದ್ದು ಪ್ರಾಣ ಹಾನಿ ತಪ್ಪಿದೆ.
ಘಟನೆಯಲ್ಲಿ ಅಂಗಡಿ ಸಂಪೂರ್ಣ ಹಾಳಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿ ಕ್ಯಾಮೆರಾ ದೃಶ್ಯದ ವಿಡಿಯೋ ಬೆಚ್ಚಿಬೀಳಿಸಿದೆ. ಘಟನೆ ಎಲ್ಲಿ ನಡೆದಿದೆ ಎಂದು ತಿಳಿದುಬಂದಿಲ್ಲ.
ವಾಶಿಂಗ್ ಮಷಿನ್ ಗೆ ಬಟ್ಟೆ ಹಾಕುವ ಮುನ್ನ ಜೇಬುಗಳಲ್ಲಿರುವ ವಸ್ತುಗಳನ್ನ ಗಮನಿಸಬೇಕೆಂದು ಕೆಲವರು ಕಮೆಂಟ್ ಮಾಡಿದ್ದಾರೆ. ಜೇಬಿನಲ್ಲಿದ್ದ ಅಪಾಯಕಾರಿ ವಸ್ತುಗಳಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಊಹಿಸಿದ್ದಾರೆ. ಅಥವಾ ಘಟನೆಗೆ ನಿಖರ ಕಾರಣ ಬೇರೆಯದ್ದೇ ಇರಬಹುದಾ ಎಂಬ ಅನುಮಾನವೂ ವ್ಯಕ್ತವಾಗಿದೆ.