ಅಂಧ ಬಾಲಕನ ರಾಜ್ಯ ಗೀತೆಗೆ ಮನಸೋತ ಛತ್ತೀಸ್ ಗಢ ಸಿಎಂ…! 27-11-2021 8:57AM IST / No Comments / Posted In: Latest News, India, Live News ಛತ್ತೀಸ್‌ಗಢದ ಅಂಧ ಬಾಲಕ ಧರ್ಮೇಂದ್ರ ದಾಸ್ ಮಹಂತ್ ರಾಜ್ಯಗೀತೆ ಹಾಡುವುದರ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾನೆ. ಧರ್ಮೇಂದ್ರ ಹಾಡಿರುವ ವಿಡಿಯೋವನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯ ಗೀತೆಯನ್ನು ಹಾಡುವ ಮೊದಲು ಹುಡುಗ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ. ನರೇಂದ್ರ ದೇವ್ ವರ್ಮಾ ಅವರು ಸಂಯೋಜಿಸಿದ ‘ಅರ್ಪಾ ಪೈರಿ ಕೆ ಧಾರ್’ ಗೀತೆಯನ್ನು ನವೆಂಬರ್ 2019 ರಲ್ಲಿ ಅಧಿಕೃತವಾಗಿ ರಾಜ್ಯ ಗೀತೆಯಾಗಿ ಅಳವಡಿಸಿಕೊಳ್ಳಲಾಯಿತು. ರಾಜ್ಯ ಗೀತೆಯ ಶೀರ್ಷಿಕೆಯು ರಾಜ್ಯದ ಎರಡು ಪ್ರಮುಖ ನದಿಗಳಾದ ಅರ್ಪಾ ನದಿ ಮತ್ತು ಪೈರಿ ನದಿಗಳನ್ನು ಉಲ್ಲೇಖಿಸುತ್ತದೆ. ಇದೀಗ ಧರ್ಮೇಂದ್ರ ರಾಜ್ಯಗೀತೆ ಹಾಡಿರುವ ವಿಡಿಯೋ ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ವೈರಲ್ ಆಗಿದೆ. ಇದನ್ನು 60,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಬಾಲಕ ನೆಟ್ಟಿಗರ ಹೃದಯ ಗೆದ್ದಿದ್ದಾನೆ. ಈ ಹಿಂದೆ ಸಹದೇವ್ ಎಂಬ ಬಾಲಕ ತನ್ನ ಶಿಕ್ಷಕರ ಮುಂದೆ ಬಚ್ಪನ್ ಕಾ ಪ್ಯಾರ್ ಹಾಡುವ ವಿಡಿಯೋ ರಾತ್ರೋರಾತ್ರಿ ಸಂಚಲನ ಸೃಷ್ಟಿಸಿತ್ತು. ನಂತರ ಸಹದೇವ್ ನನ್ನು ಸಿಎಂ ಬಾಗೇಲ್ ಸನ್ಮಾನಿಸಿದ್ದರು. "माई सेल्फ धर्मेंद्र दास महंत"…सुनिए, ये छत्तीसगढ़ का राजगीत गा रहे हैं। मुझे लगा कि सुनता ही रहूं। खूब आशीष और प्यार. pic.twitter.com/nG2XFnPz5e — Bhupesh Baghel (@bhupeshbaghel) November 23, 2021