
ಇದೀಗ, ಯುಎಸ್ ಮೂಲದ ನರಶಸ್ತ್ರಚಿಕಿತ್ಸಕ ಡಾ. ಸಂಜಯ್ ಗುಪ್ತಾ ಅವರು ತಮ್ಮ ಮಗಳಿಗೆ ಚಹಾವನ್ನು ಹೇಗೆ ಮಾಡುವುದು ಎಂದು ಹೇಳಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.
ಸಿಎನ್ಎನ್ ನ ಮುಖ್ಯ ವೈದ್ಯಕೀಯ ವರದಿಗಾರ ಗುಪ್ತಾ ಅವರು ತಮ್ಮ ತಾಯಿಯಿಂದ ಕಲಿತ ಚಹಾ ಪಾಕವಿಧಾನವನ್ನು ತಮ್ಮ ಮಗಳಿಗೆ ಕಲಿಸಿದ್ದಾರೆ. ಮೂರೂವರೆ ನಿಮಿಷಗಳ ವಿಡಿಯೋದಲ್ಲಿ ಅವರು ಕಂದು ಸಕ್ಕರೆ, ನುಣ್ಣಗೆ ಕತ್ತರಿಸಿದ ಶುಂಠಿ, ಏಲಕ್ಕಿ ಮತ್ತು ಕಪ್ಪು ಚಹಾದ ಚೀಲಗಳನ್ನು ಬಳಸುವುದನ್ನು ತೋರಿಸಿದ್ದಾರೆ.
ಮೊದಲಿಗೆ ಏಲಕ್ಕಿ ಮತ್ತು ಶುಂಠಿಯೊಂದಿಗೆ ನೀರನ್ನು ಕುದಿಸುತ್ತಾರೆ. ಆದರ, ನಂತರ ಚಹಾ ಚೀಲಗಳನ್ನು ಸೇರಿಸಿದ್ದಾರೆ. ಇದು ಚೆನ್ನಾಗೆ ಕುದಿದ ನಂತರ ಹಾಲನ್ನು ಸೇರಿಸಿ ಮಿಕ್ಸ್ ಮಾಡಿದ್ದಾರೆ. ನಂತರ ಇದನ್ನು ಸೋಸಿ ಚಹಾ ಕಪ್ ಗೆ ಹಾಕಿ ಮೂವರು ಕೂಡ ಸವಿದಿದ್ದಾರೆ. ಆದರೆ, ನೆಟ್ಟಿಗರು ಈ ರೀತಿಯ ಚಹಾ ತಯಾರಿಸುವ ವಿಧಾನದಿಂದ ಪ್ರಭಾವಿತರಾದಂತೆ ಕಂಡುಬಂದಿಲ್ಲ. ಅದು ಚಹಾ ಅಲ್ಲ, ಹಾರ್ಲಿಕ್ಸ್ ನಂತೆ ಕಾಣುತ್ತದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.