
ಸ್ಕೂಟಿ ಸವಾರ ಎದುರುಗಡೆ ಇಂದ ಬರ್ತಿದ್ದ ಕಾರ್ ಗೆ ವೇಗವಾಗಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕೆಳಗೆ ಬಿದ್ದ ಸ್ಕೂಟಿ ಸವಾರನಿಗೆ ಹೆಚ್ಚಿನ ಅಪಾಯವಾಗದೆ ಆತ ದಿಕ್ಕುತೋಚದಂತೆ ಎದ್ದು ನಿಂತಿದ್ದಾನೆ.
ಎದುರಿನ ಟ್ರಾಫಿಕ್ ಅನ್ನು ಲೆಕ್ಕಿಸದೆ ಮುಂಭಾಗದಲ್ಲಿರುವ ಕಾರನ್ನು ಹಿಂದಿಕ್ಕುವ ಸ್ಕೂಟಿ ಚಾಲಕನ ಹಠಾತ್ ನಿರ್ಧಾರದಿಂದ ಈ ಭಯಾನಕ ಅಪಘಾತ ಸಂಭವಿಸಿದೆ. ಕೆಲವೇ ಸೆಕೆಂಡುಗಳಲ್ಲಿ ಸ್ಕೂಟಿ ಕಾರ್ ಗೆ ಮುಖಾಮುಖಿಯಾಗಿ ಅಪ್ಪಳಿಸುತ್ತಿದ್ದಂತೆ ಚಾಲಕರು ನಿಜಕ್ಕೂ ಆಘಾತ ಅನುಭವಿಸಿದರು. ವೈರಲ್ ವಿಡಿಯೋ ನೋಡಿದ ಜನ ಸ್ಕೂಟಿ ಸವಾರನ ಆತುರತೆಯ ಬಗ್ಗೆ ಟೀಕಿಸಿದ್ದು ರಸ್ತೆ ಸುರಕ್ಷತೆ ಬಗ್ಗೆ ಎಚ್ಚರವಿರಬೇಕೆಂದಿದ್ದಾರೆ.