alex Certify ಮದ್ಯದಂಗಡಿ ಮೇಲೆ ಸಗಣಿ ಎರಚಿದ ಉಮಾಭಾರತಿ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿ ಮೇಲೆ ಸಗಣಿ ಎರಚಿದ ಉಮಾಭಾರತಿ; ವಿಡಿಯೋ ವೈರಲ್

ಮದ್ಯದಂಗಡಿಗಳ ವಿರುದ್ಧ ತಮ್ಮ ಆಂದೋಲನವನ್ನು ಮುಂದುವರೆಸುವ ಪ್ರಯತ್ನದಲ್ಲಿರುವ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿಯವರು ಮಧ್ಯಪ್ರದೇಶದ ಓರ್ಚಾ ಪಟ್ಟಣದ ಮದ್ಯದಂಗಡಿ ಮೇಲೆ ಸಗಣಿ ಎರಚಿದ ವಿಡಿಯೋ ವೈರಲ್ ಆಗಿದೆ.

ಮಂಗಳವಾರ ಸಂಜೆ ರಾಜ್ಯ ರಾಜಧಾನಿ ಭೋಪಾಲ್‌ನಿಂದ 330 ಕಿಮೀ ದೂರದಲ್ಲಿ ಪ್ರಕರಣ ನಡೆದಿದ್ದು, ರಾಮರಾಜ ಮಂದಿರಕ್ಕೆ ಹೆಸರುವಾಸಿಯಾದ ಧಾರ್ಮಿಕ ಪಟ್ಟಣದಲ್ಲಿ ಮದ್ಯದ ಅಂಗಡಿಯನ್ನು ನೋಡಿ ಕೋಪಗೊಂಡಿದ್ದೇನೆ ಎಂದು ಉಮಾ ಭಾರತಿ ಹೇಳಿಕೊಂಡಿದ್ದಾರೆ.

ಅಯೋಧ್ಯೆಯಂತೆಯೇ ಪವಿತ್ರವೆಂದು ಪರಿಗಣಿಸಲಾದ ಓರ್ಚಾದಲ್ಲಿ ರಾಮ ನವಮಿಯಂದು (ಈ ವರ್ಷದ ಏಪ್ರಿಲ್‌ನಲ್ಲಿ) ಐದು ಲಕ್ಷ ದೀಪಗಳನ್ನು ಬೆಳಗಿಸಿದಾಗಲೂ ಈ ಅಂಗಡಿ ತೆರೆದಿತ್ತು ಎಂಬ ಮಾಹಿತಿ ನನಗೆ ಸಿಕ್ಕಿತು ಎಂದು ಭಾರತಿ ಹೇಳಿದರು.

BIG NEWS: ಮೊದಲು ಆರೋಗ್ಯ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು; ಸುಳ್ಳು ಕೇಸ್ ಹಾಕಿ ನಮ್ಮನ್ನು ಹೆದರಿಸುತ್ತಿದ್ದಾರೆ; ಡಿ.ಕೆ. ಶಿವಕುಮಾರ್ ಆಕ್ರೋಶ

ನಾನು ಹಸುವಿನ ಸಗಣಿ ಎಸೆದಿದ್ದೇನೆ ಮತ್ತು ಕಲ್ಲು ತೂರಾಟ ಮಾಡಿಲ್ಲ ಎಂದು ಉಮಾಭಾರತಿ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಈ ಮೂಲಕ ಕಲ್ಲು ತೂರುವ ಮಂದಿಯನ್ನು ಕುಟುಕಿದ್ದಾರೆ.

ನಾನು ಗೋಶಾಲೆಯಿಂದ ಸ್ವಲ್ಪ ಹಸುವಿನ ಸಗಣಿಯನ್ನು ತಂದು ಅಂಗಡಿಯ ಮೇಲೆ ಎರಚಿದೆ ಎಂದು ಅವರು ಹೇಳಿದರು.

ಈ ಅಂಗಡಿ ಇರುವ ಸ್ಥಳಕ್ಕೆ ಅನುಮೋದನೆ ನೀಡಿಲ್ಲ ಮತ್ತು ಪವಿತ್ರ ಪಟ್ಟಣವಾದ ಓರ್ಚಾದಲ್ಲಿ ಅಂತಹ ಮಳಿಗೆಯನ್ನು ತೆರೆಯುವುದು “ಅಪರಾಧ” ಎಂದು ಹೇಳಿದ್ದಾರೆ.

ಈ ನಡುವೆ ಪೊಲೀಸ್ ಠಾಣೆಯ ಅಭಯ್ ಸಿಂಗ್, ಉಮಾ ಭಾರತಿ ಹೇಳಿಕೆಗೆ ವ್ಯತಿರಿಕ್ತವಾಗಿ ಅಂಗಡಿಯು ಮಂಜೂರಾದ ಸ್ಥಳದಲ್ಲಿಯೇ ಎಂದು ಹೇಳಿದ್ದಾರೆ.

ಈ ಅಂಗಡಿಯನ್ನು ತೆಗೆದುಹಾಕುವಂತೆ ಸ್ಥಳೀಯ ಆಡಳಿತಕ್ಕೆ ಜನರು ಪದೇ ಪದೇ ಮನವಿ ಮಾಡಿದ್ದಾರೆ ಎಂದು ಉಮಾಭಾರತಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೆ ತರಬೇಕೆಂದು ಅವರು ಸಾಕಷ್ಟು ಸಮಯದಿಂದ ಒತ್ತಾಯಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...