![](https://kannadadunia.com/wp-content/uploads/2021/11/1007268-snakes-dancing-video-twitter.jpg)
ಹೌದು, ಹೀಗೆ ಮಳೆಯಲ್ಲಿ ನೃತ್ಯ ಮಾಡಿದ್ದು ಮನುಷ್ಯರಲ್ಲ, ಹಾವುಗಳು.. ಎತ್ತರದ ಹಸಿರು ಪೊದೆಗಳ ಮಧ್ಯದಲ್ಲಿ ಎರಡು ಹಳದಿ ಬಣ್ಣದ ಹಾವುಗಳು ನೃತ್ಯ ಮಾಡಿವೆ. ಎರಡು ಹಾವುಗಳು ಪರಸ್ಪರ ಸುತ್ತಿಕೊಂಡು ಮಾಡಿರುವ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ಈ ಅದ್ಭುತ ದೃಶ್ಯ ಸೆರೆಯಾಗಿದೆ. ಅಕ್ಷಯ ಶಿವರಾಮನ್ ಎಂಬ ಮಹಿಳೆ ವಾಕಿಂಗ್ ಹೋಗುತ್ತಿದ್ದಾಗ ಹಾವುಗಳ ನೃತ್ಯ ಕಂಡಿದ್ದಾರೆ. ತಡಮಾಡದ ಅವರು, ಕೂಡಲೇ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಮಳೆ ಬರುತ್ತಿದ್ದ ವೇಳೆ ಹಾವುಗಳು ನೃತ್ಯ ಮಾಡಿರುವ ಸುಂದರ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಈ ವಿಡಿಯೋವನ್ನು ಝೋಹೋ ಸಿಇಒ ಶ್ರೀಧರ್ ವೆಂಬು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತೆಂಕಶಿಯಲ್ಲಿ ಭಾರಿ ಮಳೆ ಬರುತ್ತಿದ್ದ ವೇಳೆ ಹಾವುಗಳು ಅದ್ಭುತವಾಗಿ ನೃತ್ಯ ಮಾಡಿದೆ ಅಂತಾ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಸದ್ಯ, ವಿಡಿಯೋ ಭಾರಿ ವೈರಲ್ ಆಗಿದ್ದು, ಕೇವಲ ಒಂದು ದಿನದೊಳಗೆ 58,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.